Tuesday, June 23, 2026
spot_imgspot_img
spot_imgspot_img

ವಿಟ್ಲ: “ನೃತ್ಯೋಪಾಸನಾ “ಕಲಾ ಅಕಾಡೆಮಿ (ರಿ.) ಪುತ್ತೂರು ವಿಟ್ಲ ಶಾಖೆ ಪ್ರಸ್ತುತ ಪಡಿಸುವ “ನೃತ್ಯೋಹಂ” ಸಾಂಸ್ಕೃತಿಕ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಕಾಲಾವಧಿ ಜಾತ್ರೋತ್ಸವದ ಪ್ರಯುಕ್ತ “ನೃತ್ಯೋಪಾಸನಾ “ಕಲಾ ಅಕಾಡೆಮಿ (ರಿ.) ಪುತ್ತೂರು ಇದರ ವಿಟ್ಲ ಶಾಖೆ ಪ್ರಸ್ತುತ ಪಡಿಸುವ “ನೃತ್ಯೋಹಂ” ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಟ್ಲ ಅರಮನೆಯ ನರಸಿಂಹ ವರ್ಮ, ವೀಣಾ ನರಸಿಂಹ ವರ್ಮ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. “ನೃತ್ಯೋಪಾಸನಾ “ಕಲಾ ಅಕಾಡೆಮಿಯ ಗುರು ವಿದೂಷಿ ಶಾಲಿನಿ ಆತ್ಮಭೂಷಣ, ವಿಟ್ಲ ಅರಮನೆಯ ಕೃಷ್ಣಯ್ಯ, ರಾಜರಾಮ ವರ್ಮ,ಆರ್. ಕೆ. ಆರ್ಟ್ಸ್ ನ ರಾಜೇಶ್ ಉಪಸ್ಥಿತರಿದ್ದರು.

ಅತಿಥಿಗಳಾಗಿ ವಿಟ್ಲ ಆರಕ್ಷಕ ಠಾಣೆಯ ಮಹಿಳಾ ಸಬ್ ಇನ್ ಸ್ಪೆಕ್ಟರ್ ಶ್ರೀಮತಿ ವಿದ್ಯಾ, ವಿಟ್ಲ ಜೇಸಿಐ ಅಧ್ಯಕ್ಷ ಸೌಮ್ಯ ಚಂದ್ರಹಾಸ ಕೊಪ್ಪಳ ಉಪಸ್ಥಿತರಿದ್ದರು. ಬಳಿಕ ನೃತ್ಯೋಪಾಸನಾ ಕಲಾ ಅಕಾಡೆಮಿಯ ವಿಟ್ಲ ಶಾಖೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿರು. ರಾಧಾಕೃಷ್ಣ ಎರುಂಬು ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯಕ್ರಮ ಸಂಯೋಜಕ ಬಾಲಕೃಷ್ಣ ವಿಟ್ಲ ಕಾರ್ಯಕ್ರಮ ವಂದಿಸಿದರು.

- Advertisement -

Related news

error: Content is protected !!