Saturday, June 6, 2026
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ: ಯಾರಿಗೆ ಒಲಿಯುತ್ತೆ ವಿಟ್ಲ ಪಟ್ಟಣ ಪಂಚಾಯತ್ ನ ಅಧ್ಯಕ್ಷರ ಸ್ಥಾನ..?

- Advertisement -
- Advertisement -

ವಿಟ್ಲ ಪಟ್ಟಣ ಪಂಚಾಯತ್‌ಗೆ ಚುನಾವಣೆ ಮುಗಿದ ಎರಡೂವರೆ ವರ್ಷದ ಬಳಿಕ ಆಡಳಿತ ಭಾಗ್ಯ ಒದಗಿ ಬಂದಿದ್ದು, ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಅರ್ಹ ಅಭ್ಯರ್ಥಿಗಳ ಆಯ್ಕೆ ಇದೀಗ ಎಲ್ಲರಲ್ಲೂ ಭಾರೀ ಕುತೂಹಲ ಮೂಡಿಸಿದೆ. ವಿಟ್ಲ ಪಟ್ಟಣ ಪಂಚಾಯತ್‌ನಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪಟ್ಟಿಯಲ್ಲಿ 12 ಬಿಜೆಪಿ ಅಭ್ಯರ್ಥಿಗಳು ಹಾಗೂ ಕಾಂಗ್ರೇಸ್‌ 5 ಹಾಗೂ 1 ಎಸ್‌ಡಿಪಿಐ ಅಭ್ಯರ್ಥಿಗಳಂತೆ ಒಟ್ಟು 18 ಅಭ್ಯರ್ಥಿಗಳು ಚುನಾಯಿತ ಸದಸ್ಯರಿದ್ದಾರೆ.

18 ಅಭ್ಯರ್ಥಿಗಳ ಪೈಕಿ ಭಾರತೀಯ ಜನತಾ ಪಾರ್ಟಿಗೆ ಹೆಚ್ಚಿನ ಸ್ಥಾನ ಹೊಂದಿರುವ ಕಾರಣ ಬಿಜೆಪಿಗೆ ಅಧ್ಯಕ್ಷ ಪಟ್ಟ ದೊರಕಲಿದೆ.

ಮೀಸಲಾತಿ ಪ್ರಕಾರ ಬಿಜೆಪಿಯ ಅಶೋಕ್ ಕುಮಾರ್‌ ಶೆಟ್ಟಿ ವಾರ್ಡ್ ಸಂಖ್ಯೆ 14 , ಕರುಣಾಕರ ನಾಯ್ತೊಟ್ಟು ವಾರ್ಡ್ ಸಂಖ್ಯೆ 17 , ಜಯಂತ ಸಿ ಹೆಚ್‌ ವಾರ್ಡ್ ಸಂಖ್ಯೆ 3 ಮೂರು ಬಜೆಪಿ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಅರ್ಹರಾಗಿದ್ದಾರೆ.

ಈ ಬಗ್ಗೆ ಬಿಜೆಪಿ ಸದಸ್ಯ ಅಶೋಕ್ ಕುಮಾರ್‌ ಶೆಟ್ಟಿ ವಿಟಿವಿ ಮಾಧ್ಯಮದ ಜೊತೆ ಪ್ರತಿಕ್ರಿಯಿಸಿದ್ದು, ಪಕ್ಷದ ಯಾವುದೇ ತೀರ್ಮಾನಕ್ಕೂ ಬದ್ಧನಾಗಿದ್ದೇನೆ, ಪಕ್ಷದ ನಿಲುವು ಎಂಬಂತೆ ಪಕ್ಷ ಯಾವ ತೀರ್ಮಾನ ಕೈಗೊಂಡರೂ ಎಲ್ಲದಕ್ಕೂ ಸಿದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

ಇನ್ನೋರ್ವ ಅರ್ಹ ಅಭ್ಯರ್ಥಿ ಜಯಂತ್‌ ಸಿ ಹೆಚ್‌ ಮಾತನಾಡಿ’ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದವನು. ಬಜರಂಗದಳ ಸಂಘಟನೆಯ ಜವಬ್ದಾರಿಯನ್ನು ನಿಭಾಯಿಸಿಕೊಂಡಿದ್ದ ನನಗೆ ಪಕ್ಷದ ಜವಬ್ಧಾರಿಯೂ ಲಭಿಸಿದೆ. ನಾನು ಪಕ್ಷದ ಎಲ್ಲಾ ತೀರ್ಮಾನಗಳಿಗೂ ಬದ್ಧನಾಗಿದ್ದೇನೆ ಎಂದು ಹೇಳಿದರು.

ಕರುಣಾಕರ ನಾಯ್ತೊಟ್ಟು ಮಾತನಾಡಿ ’ಸುಮಾರು ಹದಿನೇಳು ವರ್ಷಗಳಿಂದ ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದೇನೆ. ಈ ಅವಧಿಯಲ್ಲಿ ಮೊದಲ ಬಾರಿಗೆ ನಾನು ಪಟ್ಟಣ ಪಂಚಾಯತ್‌ ಸದಸ್ಯನಾಗಿ ಆಯ್ಕೆಯಾಗಿದ್ದೇನೆ, ಪಕ್ಷದ ವರಿಷ್ಠರ ತೀರ್ಮಾನವನ್ನು ನಾನು ಗೌರವಿಸಿ, ಸ್ವೀಕರಿಸಲು ಸಿದ್ದ. ಒಂದು ವೇಳೆ ಈ ಬಾರಿಯ ಅಧ್ಯಕ್ಷ ಸ್ಥಾನ ನನಗೆ ಒಲಿದು ಬಂದರೆ ನಿಭಾಯಿಸಬಲ್ಲೆ ಎಂಬ ಭರವಸೆ ನಂಬಿಕೆ ಇದೆ ಎಂದು ಹೇಳಿದರು. ಈ ಮೂರು ಜನರ ಪೈಕಿ ಅಧಿಕಾರದ ಚುಕ್ಕಾಣಿ ಯಾರ ಪಾಲಾಗುತ್ತೆ ಎಂಬುವುದನ್ನು ಕಾದು ನೋಡಬೇಕಾಗಿದೆ.

ಇನ್ನು ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯಲ್ಲಿ ಮಹಿಳೆಯರ ಹೆಸರು ಕೇಳಿಬಂದಿದ್ದು, ಈ ಪೈಕಿ ಪಂಚಾಯತ್‌ ಸದಸ್ಯರಾದ ಸಂಗೀತ ಜಗದೀಶ್‌ ಪಾಣೆಮಜಲು ವಾರ್ಡ್ ಸಂಖ್ಯೆ 2, ರಕ್ಷಿತಾ ಸನತ್‌ ವಾರ್ಡ್ ಸಂಖ್ಯೆ 4, ವಿಜಯಲಕ್ಷ್ಮೀ ವಾರ್ಡ್ ಸಂಖ್ಯೆ 6, ಹಾಗೂ ಸುನಿತಾ ವಾರ್ಡ್ ಸಂಖ್ಯೆ 8 ಇವರಲ್ಲಿ ಉಪಾಧ್ಯಕ್ಷ ಪಟ್ಟ ಯಾರಿಗೆ ಒಲಿದು ಬರಬಹುದು ಎಂದು ಕಾದುನೋಡಬೇಕಾಗಿದೆ.

ಈ ಬಗ್ಗೆ ವಿಟ್ಲ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ ಮಾತನಾಡಿ ವಿಟ್ಲ ಪಟ್ಟಣ ಪಂಚಾಯತ್‌ನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಒಂದು ವಾರದೊಳಗೆ ನಡೆಯಲಿದೆ. ಬಹಳ ಕಾತುರದಿಂದ ಕಾದು ಕುಳಿತ ವಿಟ್ಲ ಪಟ್ಟಣ ಪಂಚಾಯತ್‌ನ ಅಧಿಕಾರ ಯಾರ ಪಾಲಾಗುತ್ತೆ ಎಂಬುವುದನ್ನು ಕಾದು ನೋಡಬೇಕಾಗಿದೆ. ಪಕ್ಷದ ಹಾಗೂ ವರಿಷ್ಠರ ಸಮ್ಮುಖದಲ್ಲಿ ಸಭೆ ನಡೆಯಲಿದ್ದು, ಪಟ್ಟಣ ಪಂಚಾಯತ್‌ನ್ನು ಸದೃಢವಾಗಿ ನಡೆಸಬಲ್ಲ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!