Monday, April 29, 2024
spot_imgspot_img
spot_imgspot_img

ವಿಟ್ಲ: ಆಪಲ್ ಮೊಬೈಲ್ ಅಂಗಡಿ ಬೋರ್ಡ್ ನ್ನು ತೆರವುಗೊಳಿಸುವಂತೆ ಶ್ರೀದೇವಿ ಡಿಜಿಟಲ್ಸ್ ಮಾಲಕರಿಂದ ಪಟ್ಟಣ ಪಂ. ಮುಖ್ಯಾಧಿಕಾರಿಗಳಿಗೆ ದೂರು

- Advertisement -G L Acharya panikkar
- Advertisement -

ವಿಟ್ಲ ಖಾಸಗಿ ಬಸ್‌ ನಿಲ್ದಾಣದ ಪಟ್ಟಣ ಪಂಚಾಯತ್ ಕಟ್ಟಡದ F-2 ಅಂಗಡಿ ಕೋಣೆಯನ್ನು ಟೆಂಡರ್‍ ಮೂಲಕ ಮಾಸಿಕ ಬಾಡಿಗೆ ಆಧಾರ ಮೇಲೆ ಪಡೆದುಕೊಂಡಿದ್ದು ಇದರಲ್ಲಿ ಶ್ರೀದೇವಿ ಡಿಜಿಟಲ್ಸ್ ಸ್ಟುಡಿಯೋವನ್ನು ಅಮಿತಾಕೃಷ್ಣ ಕೆ.ಜಿ ಎಂಬವರು ಕಳೆದ 15 ವರ್ಷದಿಂದ ನಡೆಸಿಕೊಂಡು ಬಂದಿರುತ್ತಾರೆ.

ಈ ಸ್ಟುಡಿಯೋ ಕೆಳಗಡೆ ಇದೇ ತಿಂಗಳಲ್ಲಿ ಶುಭಾರಂಭಗೊಳ್ಳಲಿರುವ ಆಪಲ್ ಮೊಬೈಲ್ ಅಂಗಡಿಯ ಮಾಲಕರು ಸ್ಟುಡಿಯೋಗೆ ಅಡ್ಡವಾಗಿ ಮೊಬೈಲ್ ಅಂಗಡಿ ಬೋರ್ಡ್‌ ಅಳವಡಿಸಿದ್ದು ಇದರಿಂದ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ. ಆಪಲ್ ಮೊಬೈಲ್ ಅಂಗಡಿ ಮಾಲಕರಿಗೆ ಈ ಮೊದಲು ಫೋನ್ ಮೂಲಕ ತಿಳಿಸಿದ್ದರೂ ಇನ್ನೂ ತೆರವುಗೊಳಿಸದೇ ಇರುವುದರಿಂದ ಇದರ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶ್ರೀದೇವಿ ಸ್ಟುಡಿಯೋ ಮಾಲಕರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!