Wednesday, August 5, 2026
spot_imgspot_img
spot_imgspot_img

ವಿಟ್ಲ: ಅಕ್ಕನ ಗಂಡನಿಂದಲೇ ನಾದಿನಿಯ ಅತ್ಯಾಚಾರ! – ಯುವತಿಯ ನಗ್ನ ಫೋಟೋ ತೆಗೆದು ಬ್ಲಾಕ್ ಮೇಲ್

- Advertisement -
- Advertisement -

ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಕಡಂಬು ಬೆದ್ರಕಾಡು ಎಂಬಲ್ಲಿ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಕಡಂಬು ಬೆದ್ರಕಾಡು ಎಂಬಲ್ಲಿನ ಯುವತಿಯನ್ನು ಆಕೆಯ ಅಕ್ಕನ ಗಂಡ ಆರೋಪಿ ಬಶೀರ ಎಂಬಾತನು ಯುವತಿಯನ್ನು ಆಕೆಯ ಇಚ್ಚೆಗೆ ವಿರುದ್ಧವಾಗಿ ಆಕೆಯನ್ನು ಅತ್ಯಾಚಾರವೆಸಗಿದ್ದಾನೆ.

ಯುವತಿ ಮತ್ತು ಆಕೆಯ ತಾಯಿ ಇಬ್ಬರೆ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಆರೋಪಿ ಬಶೀರ್ ಅವರ ಮನೆಗೆ ಹೋಗಿ ಯುವತಿಯ ತಾಯಿಯನ್ನು ಜೋರು ಮಾಡಿ ಮನೆಯಿಂದ ಹೊರಗೆ ಕಳುಹಿಸಿ , ಯುವತಿಯನ್ನು ಬಲವಂತವಾಗಿ ರೂಮಿಗೆ ಎಳೆದುಕೊಂಡು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಅತ್ಯಾಚಾರವೆಸಗಿದ್ದಲ್ಲದೇ ಆಕೆಯ ನಗ್ನ ಪೋಟೋಗಳನ್ನು ಆತನ ಮೋಬೈಲ್‌ನಲ್ಲಿ ಸೆರೆ ಹಿಡಿದು ನೀನು ನನ್ನೊಂದಿಗೆ ಲೈಂಗಿಕ ಕ್ರಿಯೆ ಮಾಡಲು ಸಿಗದೇ ಇದ್ದರೆ ನನ್ನ ಮೊಬೈಲ್‌ನಲ್ಲಿರುವ ನಿನ್ನ ಪೋಟೋಗಳನ್ನು ವೈರಲ್‌ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ. ಈ ಪ್ರಕರಣ ವಿಟ್ಲ ಠಾಣೆಯಲ್ಲಿ ಆರೋಪಿಯ ವಿರುದ್ಧ ಯುವತಿಯು ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!