Tuesday, June 9, 2026
spot_imgspot_img
spot_imgspot_img

ವಿಟ್ಲ: ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ 155 ಲಕ್ಷ ಅನುದಾನದ ರಸ್ತೆ ಅಭಿವೃದ್ಧಿಯ ಶಿಲಾನ್ಯಾಸಗೈದ ಶಾಸಕ ಸಂಜೀವ ಮಠಂದೂರು

- Advertisement -
- Advertisement -

ವಿಟ್ಲ: ವಿಟ್ಲ ಮೂಡ್ನೂರು ಗ್ರಾಮದ ವಿವಿಧ ಸಂಪರ್ಕ ರಸ್ತೆಗೆ ಶಾಸಕ ಸಂಜೀವ ಮಠಂದೂರು ಅವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಶಾಸಕರ ಅತೀವ ಕಾಳಜಿ ಹಾಗೂ ಮುತುವರ್ಜಿಯಿಂದ ವಿಟ್ಲ ಮೂಡ್ನೂರು ಗ್ರಾಮದ ವಿವಿಧ ಸಂಪರ್ಕ ರಸ್ತೆಗೆ ಪರಿಶಿಷ್ಟ ಜಾತಿ ಹಾಗೂ ಪಂಗಡ ಯೋಜನೆಯ ಗಿರಿಜನ ಅಭಿವೃದ್ಧಿ ಇಲಾಖೆಯ ಮೂಲಕ ವಿಶೇಷ ಅನುದಾನ ಸುಮಾರು 1.5ಕೋಟಿ ಹಣ (ಈವರೆಗೆ ಮಂಜೂರಾದ ಹಣದ ಗರಿಷ್ಠ ಮೊತ್ತ) ಮಂಜೂರಾತಿ ಆಗಿದೆ.

ಗುಂಪಲಡ್ಕ -ಸರೋಳಿಮೂಲೆ ರಸ್ತೆಗೆ 25ಲಕ್ಷ, ಪೆರುವಾಜೆ-ಪಿಲಿಂಜ-ಅನಾವುಡಡ್ಕ ರಸ್ತೆಗೆ 25ಲಕ್ಷ, ನಾಟೆಕಲ್ಲು-ದಾದುಕೋಡಿ-ಪಿಲಿಂಜ ರಸ್ತೆಗೆ 25ಲಕ್ಷ, ನಾಟೆಕಲ್ಲು-ದಾದುಕೋಡಿ ರಸ್ತೆಗೆ 30ಲಕ್ಷ, ಕಬ್ಬಿನಹಿತ್ಲು ಸಂಪರ್ಕ ರಸ್ತೆ 25ಲಕ್ಷ, ಚಪುಡಿಯಡ್ಕ-ಕಟ್ಟತ್ತಿಲ-ಕುಶಾಲನಗರ- ಮಾನಾಜೆಮೂಲೆ ರಸ್ತೆಗೆ 25ಲಕ್ಷ ಮಂಜೂರಾತಿ ಆಗಿದೆ.

ಈ ಕಾರ್ಯಕ್ರಮದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪಂಚಾಯತ್ ಅಧ್ಯಕ್ಷ ಜಯ ಪ್ರಕಾಶ್ ನಾಯಕ್, ಪಂಚಾಯತ್ ಸದಸ್ಯರಾದ ಪುನೀತ್ ಮಾಡತ್ತಾರ್, ಮಹಾಬಲೇಶ್ವರ ಭಟ್, ಲೋಕೇಶ್ ನಾಟೆಕಲ್ಲು, ಪುಣಚ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ದಯಾನಂದ ಉಜಿರೆಮಾರ್, ಸದಸ್ಯರಾದ ತೀರ್ಥರಾಮ ಗೌಡ , ಹರಿಶ್ಚಂದ್ರ ನಾಯಕ್, ಯತೀಶ್ ಬೇರಿಕೆ, ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!