Friday, April 26, 2024
spot_imgspot_img
spot_imgspot_img

ವಿಟ್ಲ: ಜನೌಷಧಿ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಮೆಡಿಸಿನ್ ಲಭ್ಯ

- Advertisement -G L Acharya panikkar
- Advertisement -
driving

ಇಂದಿನ ದಿನಗಳಲ್ಲಿ ದುಬಾರಿ ಮೆಡಿಸಿನ್ ಬಡವರ ಕೈಗೆ ಎಟಕುವುದಿಲ್ಲ. ಸದಾ ಒಂದಲ್ಲೊಂದು ಖಾಯಿಲೆಯಿಂದ ಜನರು ಬಳಲುತ್ತಿದ್ದರೆ ದುಬಾರಿ ಮೆಡಿಸಿನ್ ಖರೀದಿಸಲು ಹಣ ಹೊಂದಿಸಲು ಕಷ್ಟಕರವಾಗಿದೆ. ಜನರ ಯೋಗಕ್ಷೇಮವನ್ನು ಗಮನದಲ್ಲಿರಿಸಿಕೊಂಡು ರೂಪಿಸಿದ ಯೋಜನೆಯೇ ಜನೌಷಧಿ ಕೇಂದ್ರ. ಮಾರುಕಟ್ಟೆಯ ದರಕ್ಕಿಂತ ಶೇ.70ರಷ್ಟು ರಿಯಾಯ್ತಿ ದರದಲ್ಲಿ ಜೆನರಿಕ್ ಔಷಧಿಗಳು ಲಭ್ಯವಿದೆ. ವಿಟ್ಲದಲ್ಲೂ ಈ ಜನೌಷಧಿ ಕೇಂದ್ರ ಕಳೆದ ಕೆಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಲಕ್ಷ್ಮಿ ಗಣೇಶ್ ಮೆಡಿಕಲ್ ನ ನೇತೃತ್ವದಲ್ಲಿ ಈ ಜನೌಷಧಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ.

ಜನೌಷಧಿ ಕೇಂದ್ರದ ಪ್ರಯೋಜನಗಳು:
ಜನೌಷಧ ಕೇಂದ್ರಗಳಲ್ಲಿ ಮಾರುಕಟ್ಟೆ ದರಕ್ಕಿಂತ ಶೇ.70ರಷ್ಟು ರಿಯಾಯಿತಿ ದರದಲ್ಲಿ ಔಷಧ ಹಾಗೂ ವೈದ್ಯಕೀಯ ಸಲಕರಣೆಯನ್ನು ಒದಗಿಸುವ ಅತ್ಯಂತ ಅಗ್ಗದ ಯೋಜನೆಯಾಗಿದೆ. ಪ್ರಧಾನ ಮಂತ್ರಿ ಜನ ಔಷಧ ಕೇಂದ್ರವು ಭಾರತ ಸರ್ಕಾರದ ಔಷಧ ಇಲಾಖೆಯಿಂದ ಪ್ರಾಯೋಜಿಸಲ್ಪಟ್ಟಿರುವ ಜೆನರಿಕ್ ಔಷಧಿಗಳ ಮೆಡಿಕಲ್ ಸ್ಟೋರ್ ಆಗಿರುತ್ತದೆ. ಇದರಲ್ಲಿ ಅತ್ಯುತ್ತಮ ಗುಣಮಟ್ಟದ ಜೆನರಿಕ್ ಔಷಧಿಗಳು ಖಾಸಗಿ ಔಷಧಿಗಳ ಬೆಲೆಗಿಂತ ಶೇ. 30 ರಿಂದ 80 ರವರೆಗೆ ರಿಯಾಯಿತಿ ದರದಲ್ಲಿ ದೊರೆಯುತ್ತದೆ.

ಅಷ್ಟೇ ಅಲ್ಲದೇ, ಇದಕ್ಕೆ ಯಾವುದೇ ಬ್ರಾಂಡ್‍ನ ಹೆಸರು ಇರುವುದಿಲ್ಲ. ಈ ಔಷಧವು ಯಾವುದೇ ಬ್ರಾಂಡಿನ ಔಷಧಿಗೆ ಹೋಲಿಸಿದರೆ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿರುತ್ತದೆ. ಹಾಗೂ ಬೆಲೆಯಲ್ಲಿ ಬ್ರಾಂಡೆಡ್ ಔಷಧಿಗಿಂತ ಕಡಿಮೆ ಇರುತ್ತದೆ. ಜನೌಷಧಿ ಅಥವಾ ಜನೆರಿಕ್ ಔಷಧಿ ಎಂದು ಕರೆಯುವ ಸರಕಾರದ ಈ ಔಷಧಿ, ಮಾತ್ರೆಗಳು ಕಡಿಮೆ ಬೆಲೆಯಲ್ಲಿ ಶ್ರೇಷ್ಟ ಗುಣಮಟ್ಟವನ್ನು ಹೊಂದಿರುತ್ತವೆ ಹಾಗೂ ಸರಕಾರವೇ ಸಾರ್ವಜನಿಕರಿಗೆ ತಯಾರು ಮಾಡಿ (ಪೇಟೆಂಟ್ ಇಲ್ಲದ) ನೇರವಾಗಿ ಜನೌಷಧಿ ಕೇಂದ್ರಗಳ ಮೂಲಕ ಮಾರಾಟ ಮಾಡುವ ವ್ಯವಸ್ಥೆ ಇದಾಗಿದೆ.

ಯಾವೆಲ್ಲಾ ಮಾತ್ರೆಗಳು ಲಭ್ಯ:
ಗರ್ಭಿಣಿ ಸ್ತ್ರೀಯರು ಬಳಸುವ ಕ್ಯಾಲ್ಸಿಯಂ ಮಾತ್ರೆಗಳು, ಅಪೌಷ್ಟಿಕತೆ ನಿವಾರಣೆಗೆ, ಸಕ್ಕರೆ ಕಾಯಿಲೆ, ಹೃದ್ರೋಗ, ರಕ್ತದೊತ್ತಡ, ಗ್ಯಾಸ್ಟ್ರೋ, ಆಯಂಟಿ ಬಯೋಟಿಕ್ಸ್ ಸೇರಿದಂತೆ 1440ಕ್ಕೂ ಹೆಚ್ಚು ಔಷಧಿಗಳು ಜನೌಷಧಿ ಮೆಡಿಕಲ್ ಸ್ಟೋರ್ ಗಳಲ್ಲಿ ಅತ್ಯಂತ ಕಡಿಮೆ ಬೆಲೆ ಲಭ್ಯವಾಗುತ್ತಿವೆ. ಹಾಗಾಗಿ ಶೇಕಡಾ 50 ರಿಂದ ಶೇಕಡಾ 80 ರಷ್ಟು ವ್ಯತ್ಯಾಸ ಜೆನೆರಿಕ್ ಔಷಧಿ ಮತ್ತು ಖಾಸಗಿ ಕಂಪನಿ ಗಳ ಬ್ರ್ಯಾಂಡೆಡ್ ಔಷಧಿಗಳು ಲಭ್ಯವಿದೆ.

ಬ್ಯೂರೋ ಆಫ್ ಫಾರ್ಮಾ ಪಿಎಸ್ ಯು ಆಫ್ ಇಂಡಿಯಾ ಮೂಲಕ ಜನೌಷಧ ಮಳಿಗೆಗಳು ಕಾರ್ಯ ಚಟುವಟಿಕೆ ನಡೆಸುತ್ತಿದ್ದು, ಜನೌಷಧ ಮಳಿಗೆಗಳಲ್ಲಿ 1440ಕ್ಕೂ ಅಧಿಕ ಬಗೆಯ ಜನೌಷಧಗಳು ದೊರೆಯುವಂತೆ ಮಾಡಲಾಗಿದೆ ಹಾಗೂ 150 ಮಾದರಿಯ ವೈದ್ಯಕೀಯ ಪರಿಕರಗಳು ಸಿಗುವಂತೆ ನೋಡಿಕೊಳ್ಳಲಾಗಿದೆ. ಮುಖ್ಯವಾಗಿ ರಕ್ತದೊತ್ತಡ, ಡಯಾಬಿಟೀಸ್, ಹೆಚ್.ಐ.ವಿ ಏಡ್ಸ್, ಕಿಡ್ನಿ ವೈಫಲ್ಯ, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಔಷಧಿಗಳನ್ನು ಜನೌಷದ ಮಳಿಗೆಗಳಲ್ಲಿ ದೊರಕುವಂತೆ ನೋಡಿಕೊಳ್ಳಲಾಗಿದೆ. ಬಡ ಜನರ ಆರೋಗ್ಯ ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ವೈದ್ಯರುಗಳು ಕಡ್ಡಾಯವಾಗಿ ಜನರಿಕ್ ಔಷಧಿಗಳನ್ನೆ ಸೂಚಿಸುವಂತೆ ನಿರ್ದೇಶಿಸಲಾಗಿದೆ.

ವಿಟ್ಲದ ಜನೌಷಧಿ ಕೇಂದ್ರದಲ್ಲಿ ಬಹುತೇಕ ಮೆಡಿಸಿನ್ ಹಾಗೂ ವೈದ್ಯಕೀಯ ಪರಿಕರಗಳು ಲಭ್ಯವಿದ್ದು, ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಈ ಮೂಲಕ ಸೂಚಿಸಲಾಗಿದೆ.

- Advertisement -

Related news

error: Content is protected !!