Wednesday, April 17, 2024
spot_imgspot_img
spot_imgspot_img

ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘ : 55.60 ಲಕ್ಷ ರೂ. ನಿವ್ವಳ ಲಾಭ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ 2019-20ನೇ ಸಾಲಿನಲ್ಲಿ 128.93ಕೋಟಿ ರೂ.ಗೂ ಮಿಕ್ಕಿ ವ್ಯವಹಾರ ನಡೆಸಿದ್ದು. ಸುಮಾರು55.60 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ ಎನ್. ಹೇಳಿದರು.

ಅವರು ಬುಧವಾರ ಸಂಘದ ಕಚೇರಿಯಲ್ಲಿ ಪ್ರಸಕ್ತ ಆರ್ಥಿಕ ವರ್ಷದ ಪ್ರಗತಿಯ ವಿವರ ನೀಡಿದರು. 2019-20ನೇ ಸಾಲಿನಲ್ಲಿ 129 ಮಂದಿ ಸದಸ್ಯರಾಗಿ ಸೇರ್ಪಡೆಯಾಗಿದ್ದು,24.27 ಲಕ್ಷ ರೂ. ಪಾಲು ಬಂಡವಾಳವಿದೆ. ಸದ್ರಿ ವರ್ಷದಲ್ಲಿ 4803 ಎ ತರಗತಿ ಸದಸ್ಯರಿದ್ದು, 2.28 ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. ಸರಕಾರದ ಬಿ ತರಗತಿಯ 81 ಸಾವಿರ ರೂ ಪಾಲುಬಂಡವಾಳವಿದ್ದು, ಒಟ್ಟು 2.29 ಕೋಟಿ ಪಾಲು ಬಂಡವಾಳವಿದೆ. 2019-21ನೇ ಸಾಲಿನಲ್ಲಿ ಒಟ್ಟು ಠೇವಣಾತಿಯು 18.69 ಕೋಟಿ ರೂ.ಗಳಿವೆ ಎಂದು ತಿಳಿಸಿದರು.

ಸಂಘದ ಸದಸ್ಯರ ಅವಶ್ಯಕತೆಗೆ ಅನುಗುಣವಾಗಿ 20.58 ಕೋಟಿ ಸಾಲ ವಿತರಿಸಲಾಗಿದೆ. ಅಲ್ಪಾವಧಿ ಸಾಲವಾಗಿ ರೂ.8.87 ಕೋಟಿ ರೂ., ಮಧ್ಯಮಾವಧಿ ಸಾಲವಾಗಿ ರೂ.53.93 ಲಕ್ಷ ರೂ. ಸಾಲ ವಿತರಿಸಲಾಗಿದ್ದು, 2020ನೇ ಸಾಲಿನ ಮಾ.31ಕ್ಕೆ 23 ಕೋಟಿ ರೂ. ಹೊರಬಾಕಿ ಸಾಲವಿದೆ. ಸಂಘವು ವಿಟ್ಲಮುಡ್ನೂರು ಗ್ರಾಮದಲ್ಲಿ ಹೊಸ ಕಟ್ಟಡವನ್ನು ಹೊಂದಿದ್ದು, ಅಲ್ಲಿ ಪಿವಿಸಿ ಪೈಪ್ ಮತ್ತು ಕೃಷಿ ಸಲಕರಣೆಗಳ ವ್ಯಾಪಾರ ನಡೆಸುತ್ತಿದೆ. ಅದೇ ವ್ಯವಹಾರವನ್ನು ವಿಟ್ಲದ ಪ್ರಧಾನ ಕಚೇರಿಯಲ್ಲಿ ನಡೆಸಲು ಉದ್ದೇಶಿಸಲಾಗಿದೆ.

ರಸಗೊಬ್ಬರ ದಾಸ್ತಾನು ಕೊಠಡಿಯು ಶಿಥಿಲಾವಸ್ಥೆಯಲ್ಲಿದ್ದು ಸುಮಾರು 45 ಲಕ್ಷ ರೂ.ವೆಚ್ಚದಲ್ಲಿ ನೂತನ ದಾಸ್ತಾನು ಕೊಠಡಿ ನಿರ್ಮಾಣ ಮಾಡಲು ತೀಮಾರ್ನಿಸಲಾಗಿದೆ. ಎಸ್ಸೆಸೆಲ್ಸಿ, ಪಿಯುಸಿಯಲ್ಲಿ ಶೇ.80ಕ್ಕಿಂತ ಅಂಕ ಅಂಕ ಪಡೆದ ಸದಸ್ಯರ ಮಕ್ಕಳನ್ನು ಪ್ರೋತ್ಸಾಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಹಾಬಲೇಶ್ವರ ಭಟ್ ಆಲಂಗಾರು, ನಿರ್ದೇಶಕರಾದ ಉದಯ ಕುಮಾರ್, ರಾಘವೇಂದ್ರ ಪೈ, ವಾಸು ಸಿ.ಎಚ್., ಶಿವಪ್ಪ ನಾಯ್ಕ, ಅಚ್ಯುತ ನಾಯಕ್, ಸಂಗೀತಾ ಎನ್. ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಲಾ ಕೆ.ಪಿ. ಉಪಸ್ಥಿತರಿದ್ದರು.

ಪೋಟೊ-೧೬ವಿಟಿಎಲ್-ವಿಎಸ್‌ಎಸ್- ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾ ಭವನದಲ್ಲಿ ಆರ್ಥಿಕ ವರ್ಷದ ಪ್ರಗತಿಯ ಬಗ್ಗೆ ಮಾಹಿತಿ ನೀಡಲಾಯಿತು.

- Advertisement -

Related news

error: Content is protected !!