Wednesday, May 8, 2024
spot_imgspot_img
spot_imgspot_img

ವಿಟ್ಲ: ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಸಹಿತ ನಾಲ್ವರು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢ!

- Advertisement -G L Acharya panikkar
- Advertisement -

ವಿಟ್ಲ: ವಿಟ್ಲದ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಸಹಿತ ನಾಲ್ವರು ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ದೃಡಪಟ್ಟಿದ್ದು, ಇದೀಗ ಬ್ಯಾಂಕ್ ಅನ್ನು ಬಂದ್ ಮಾಡಲಾಗಿದೆ.

ಕಳೆದ ಕೆಲವು ದಿನಗಳಿಂದ ವಿಟ್ಲದ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಕೊರೊನಾ ಕರಿನೆರಳು ಆವರಿಸಿತ್ತು. ಮೊದಲಿಗೆ ಒಬ್ಬರು ಸಿಬ್ಬಂದಿಗೆ ಸೋಂಕು ತಗುಲಿತ್ತು. ಬಳಿಕ ಅವರ ಮನೆಯವರಲ್ಲಿ ಎಲ್ಲರಲ್ಲೂ ಸೋಂಕು ಪತ್ತೆಯಾಗಿತ್ತು. ಇನ್ನುಳಿದ ಸಿಬ್ಬಂದಿಗಳು ಪರೀಕ್ಷೆ ನಡೆಸಿದ್ದು, ಅವರಲ್ಲಿಯೂ ಸೋಂಕು ದೃಢಪಟ್ಟಿದೆ. ಬ್ಯಾಂಕ್ ಮನೇಜರ್ ಒಬ್ಬರೇ ಬ್ಯಾಂಕ್ ನಲ್ಲಿ ಕೆಲ ದಿನ ಕರ್ತವ್ಯದಲ್ಲಿದ್ದರು. ಇದೀಗ ಅವರು ಪರೀಕ್ಷೆ ಮಾಡಿಸಿದ್ದು, ಅವರಲ್ಲಿಯೂ ಸೋಂಕು ಪತ್ತೆಯಾಗಿದೆ. ಇದೀಗ ಬ್ಯಾಂಕ್ ಗೆ ಬೀಗ ಹಾಕಲಾಗಿದೆ.

ಇದುವರೆಗೂ ಬ್ಯಾಂಕ್ ಗೆ ಹಲವು ಮಂದಿ ಗ್ರಾಹಕರು ವ್ಯವಹಾರ ನಡೆಸಲು ಆಗಮಿಸಿದ್ದು, ಅವರೆಲ್ಲ ಪರೀಕ್ಷೆ ಕೋವಿಡ್ ಪರೀಕ್ಷೆ ನಡೆಸಿ, ಮನೆಯಲ್ಲಿಯೇ ಇರುವುದು ಉತ್ತಮವೆಂಬ ಮಾತುಗಳು ಕೇಳಿ ಬರುತ್ತಿದೆ. ಎಲ್ಲರೂ ಆರೋಗ್ಯವಾಗಿದ್ದು, ಹೋಂ ಐಸೋಲೇಶನ್ ನಲ್ಲಿದ್ದಾರೆ.

ವಿಟ್ಲ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಕಳೆದ ಲಾಕ್ ಡೌನ್ ನಿಂದ ಇದುವರೆಗೂ ಭಾರೀ ಮುಂಜಾಗ್ರತೆ ವಹಿಸಿದ್ದು, ಒಮ್ಮೆಲೇ ಯಾರಿಗೂ ಒಳಗಡೆ ಪ್ರವೇಶ ನೀಡುತ್ತಿರಲಿಲ್ಲ. ಕೆಲವರನ್ನು ಹೊರಗಡೆ ಬಿಸಿಲಿನಲ್ಲಿ ಕಾಯುಸುತ್ತಿದ್ದರು. ಬಾಗಿಲು ಬಳಿ ಸಿಬ್ಬಂದಿಗಳನ್ನು ನಿಯೋಜಿಸಿ, ಅಲ್ಲಿಯೇ ವ್ಯವಹಾರ ನಡೆಸುತ್ತಿದ್ದರು. ಈ ಬಗ್ಗೆ ಜನರು ಬ್ಯಾಂಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇಷ್ಟೆಲ್ಲ ಜಾಗೃತಿ ವಹಿಸಿದ ಬ್ಯಾಂಕ್ ನ ಎಲ್ಲಾ ಸಿಬ್ಬಂದಿಗಳಲ್ಲಿ ಸೋಂಕು ಪತ್ತೆಯಾಗಿದ್ದು, ಅಚ್ಚರಿ ಮೂಡಿಸಿದೆ.

- Advertisement -

Related news

error: Content is protected !!