Friday, July 31, 2026
spot_imgspot_img
spot_imgspot_img

ವಿಟ್ಲ: ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಕಚೇರಿಯಿಂದ ಕಳ್ಳತನಕ್ಕೆ ಯತ್ನ

- Advertisement -
- Advertisement -

ವಿಟ್ಲ: ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಕಚೇರಿಯಿಂದ ಕಳ್ಳತನಕ್ಕೆ ಯತ್ನ ನಡೆಸಿದ ಘಟನೆ ನಡೆದಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಶೇಖರ್ ಪೂಜಾರಿಯವರು ಎಂದಿನಂತೆ ಕೆಲಸ ಮುಗಿಸಿ ಜು.16 ರಂದು ಕಚೇರಿಯ ಜವಾನ್ ಬಾಲಕೃಷ್ಣ ರವರೊಂದಿಗೆ ಬೀಗ ಹಾಕಿ ತೆರಳಿದ್ದು ಮರುದಿನ ಬೆಳಗ್ಗೆ ಕಚೇರಿ ಬೀಗ ತೆಗೆದು ಒಳಗೆ ಪ್ರವೇಶಿಸಿದಾಗ ಸೊಸೈಟಿಯ ಮಹಡಿಯ ಹಂಚನ್ನು ತೆಗೆದು ಒಳಗಡೆ ನುಗ್ಗಿ ಕಪಾಟಿನ ಬಾಗಿಲು ತೆಗೆದ ರೀತಿಯಲ್ಲಿ ಇದ್ದುದು ಬೆಳಕಿಗೆ ಬಂದಿದೆ.

ಸದ್ಯ ಕಳ್ಳರು ಕಳ್ಳತನ ನಡೆಸಲು ಬಂದಿದ್ದು ಯಾವುದೇ ಹಣ ಬೆಲೆ ಬಾಳುವ ವಸ್ತು, ಚಿನ್ನ ಸಿಗದೆ ಕಳ್ಳತನಕ್ಕೆ ಪ್ರಯತ್ನಿಸಿದ ಘಟನೆ ನಡೆದಿದೆ.

ಈ ಬಗ್ಗೆ ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ದೂರು ನೀಡಿದ್ದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!