Monday, April 29, 2024
spot_imgspot_img
spot_imgspot_img

ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕ ವೃಂದ (ರಿ.) ಇದರ ವತಿಯಿಂದ ಆಟಿಡ್ ಕೆಸರ್‌ಡೊಂಜಿ ದಿನ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕ ವೃಂದ (ರಿ.) ಇದರ ವತಿಯಿಂದ ತುಳುನಾಡ ಜಾನಪದ ಕ್ರೀಡೆ ಮತ್ತು ಆಚರಣೆಗಳನ್ನು ನೆನಪಿಸುವ ಸಲುವಾಗಿ ಮತ್ತು ಯುವಜನತೆಯ ಮನಸ್ಸುಗಳನ್ನು ದೇಶ ಭಾಷೆಗಳೊಂದಿಗೆ ಒಗ್ಗೂಡಿಸುವ ಸಲುವಾಗಿ ಆಟಿಡ್ ಕೆಸರಡೊಂಜಿ ದಿನ ಕಾರ್ಯಕ್ರಮ ನಡೆಯಿತು.

ಶ್ರೀ ವಿಷ್ಣುಮೂರ್ತಿ ಯುವಕ ವೃಂದ (ರಿ.) ವಿಷ್ಣುನಗರ-ಕುಂಡಡ್ಕ, ಕುಳ-ವಿಟ್ಲಮುಡ್ನೂರು, ಬಂಟ್ವಾಳ ತಾಲೂಕು ದ.ಕ.ಇದರ ವತಿಯಿಂದ “ಆಟಿಡ್‌ ಕೆಸರೊಂಜಿ ದಿನ” ಕಾರ್ಯಕ್ರಮವು ದಿನಾಂಕ 07-08-2022ನೇ ಆದಿತ್ಯವಾರ ಕುಳ ಗುಣಶ್ರೀ ಶಾಲೆಯ ಹತ್ತಿರ, ನಾಗೇಶ್ ಪಾದೆಯವರ ಗದ್ದೆಯಲ್ಲಿ ನಡೆಯಿತು.

ಬೆಳಗ್ಗೆ ಗಂಟೆ 9.00ಕ್ಕೆ ಉದ್ಘಾಟನಾ ಸಮಾರಂಭವನ್ನು ವಿಟ್ಲ ಅರಮನೆ ಕೃಷ್ಣಯ್ಯ ಕೆ. ಉದ್ಘಾಟಿಸಿ, ಸಭೆಯ ಅಧ್ಯಕ್ಷತೆಯನ್ನು ಆಡಳಿತ ಸಮಿತಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಅಧ್ಯಕ್ಷರು ದಯಾನಂದ ಶೆಟ್ಟಿ ಉಜಿರೆಮಾರ್‌ ವಹಿಸಲಿದ್ದರು. ಅತಿಥಿಗಳಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಡ್ಕಿದು ಗ್ರಾಮ ಪಂಚಾಯತ್ ಗೋಕುಲ್‌ ದಾಸ್ ಭಕ್ತ, ದ.ಕ ಚೇನು ಸಾಕಾಣಿಕಾ ಸಹಕಾರಿ ಸಂಘದ ಉಪಾಧ್ಯಕ್ಷರು ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಮಹಾಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ಪುತ್ತೂರು ಪ್ರಾಚಾರ್ಯರು ನಾರಾಯಣ ಪೂಜಾರಿ ಪಿಲಿಂಜ, ಸಾಯಿ ಟೌನ್‌ ಕಿಚನ್‌ ವಿಟ್ಲ ಮಾಲಕ ದಿವಾಕರ ಶೆಟ್ಟಿ ಅಬೀರಿ, ಯುವಕೇಸರಿ ಅಬೀರಿ ಅಧ್ಯಕ್ಷ ಚಿದಾನಂದ ಶೆಟ್ಟಿ ಉಜಿರೆಮಾರು, ಪ್ರಗತಿಪರ ಕೃಷಿಕ ಪದ್ಮನಾಭ ಶೆಟ್ಟಿ ಚಪ್ಪುಡಿಯಡ್ಕ, ಅಡ್ಯಾಲು ಶಾಖೆ ಇಡ್ಕಿದು ಸೇವಾ ಸಹಕಾರಿ ಸಂಘದ ಶಾಖಾಧಿಕಾರಿ ನಾಗೇಶ ಪಾದೆ ಇವರು ಉಪಸ್ಥಿತಿ ಇದ್ದರು.

vtv vitla
- Advertisement -

Related news

error: Content is protected !!