Tuesday, April 30, 2024
spot_imgspot_img
spot_imgspot_img

ವಿಟ್ಲ: ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ವಿಟ್ಲ ಇದರ ವಾರ್ಷಿಕ ಮಹಾಸಭೆ; 168 ಕೋಟಿ ವ್ಯವಹಾರ – 68 ಲಕ್ಷ ಲಾಭ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ವಿಟ್ಲ ಇದರ ವಾರ್ಷಿಕ ಮಹಾಸಭೆಯು ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ, ಪೊನ್ನೊಟ್ಟು, ವಿಟ್ಲ ಇಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ವರದಿ ಮಂಡನೆ, 2021-22ನೇ ಸಾಲಿನ ಜಮಾ ಖರ್ಚು ವ್ಯಾಪಾರ ಲಾಭ ನಷ್ಟ ಮತ್ತು ಆಸ್ತಿ ಜವಾಬ್ದಾರಿ ತಖ್ತೆಗಳ ಮಂಜೂರಾತಿ, ಲೆಕ್ಕ ಪರಿಶೋಧನಾ ವರದಿ ಮಂಜೂರಾತಿ, ಅಂದಾಜು ಬಜೆಟ್‌ಗಿಂತ ಮಿಕ್ಕಿ ಆದ ಖರ್ಚಿನ ಮಂಜೂರಾತಿ, 2022-23ನೇ ವರ್ಷದ ಬಾಬ್ತು ತಯಾರಿಸಲಾದ ಅಂದಾಜು ಆಯವ್ಯಯ ಪಟ್ಟಿ, 2021-22ನೇ ವರ್ಷದ ಲಾಭಾಂಶ ವಿಂಗಡನೆ, ಸಂಯೋಜಿತ ಸಂಸ್ಥೆಗಳಿಗೆ ಪ್ರತಿನಿಧಿಗಳ ಆಯ್ಕೆ, 2022-23ನೇ ಸಾಲಿನ ಲೆಕ್ಕ ಪರಿಶೋಧಕರ ಆಯ್ಕೆ, ಠೇವಣಾತಿ ನಿಯಮ ಮಂಜೂರಾತಿ ನಡೆಯಿತು.

2021-22ನೇ ಸಾಲಿನಲ್ಲಿ ಸಂಘವು 168.30 ಕೋಟಿ ವ್ಯವಹಾರ ನಡೆಸಿದೆ. ಎಲ್ಲಾ ಖರ್ಚುಗಳನ್ನು ಕಳೆದು ರೂ. 68 ಲಕ್ಷ ಲಾಭಾಂಶ ಗಳಿಸಿದೆ.

ದೀಪಪ್ರಜ್ವಲನೆಯನ್ನು ಮಾಜಿ ಅಧ್ಯಕ್ಷ ಎಂ ಕೆ ಪುರುಷೋತ್ತಮ ಭಟ್ ಹಾಗೂ ಮಾಜಿ ನಿರ್ದೇಶಕ ಹಿರಿಯ ಸದಸ್ಯ ಚೆನ್ನಪ್ಪ ಗೌಡ ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ ಯನ್, ಉಪಾಧ್ಯಕ್ಷ ಮಹಾಬಲೇಶ್ವರ ಭಟ್, ನಿರ್ದೇಶಕರುಗಳಾದ ಉದಯ ಕುಮಾರ್, ದಯಾನಂದ ಶೆಟ್ಟಿ ಉಜಿರೆಮಾರು, ಸದಾನಂದ ಗೌಡ, ರಾಘವೇಂದ್ರ ಪೈ, ದಿನೇಶ ಕೆ, ವಾಸು ಸಿ. ಹೆಚ್, ಶಿವಪ್ಪ ನಾಯ್ಕ, ಅಚ್ಯುತ ನಾಯಕ್, ಗೌರಿ ಯಸ್.ಯನ್. ಭಟ್, ಸಂಗೀತಾ ಯನ್, ಕವಿತಾ ಕೆ. ಯಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಲಾ ಕೆಪಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಭುವನೇಶ್ವರ ಬಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ದಯಾನಂದ ಶೆಟ್ಟಿ ಉಜಿರೆಮಾರ್ ಸ್ವಾಗತಿಸಿದರು. ಅಧ್ಯಕ್ಷರಾದ ನರ್ಸಪ್ಪ ಪೂಜಾರಿ ಯನ್ ಪ್ರಾಸ್ತವಿಕಗೈದರು. ರಮ್ಯಾ ನವೀನ್ ಕೆ ಕಾಶಿಮಠ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಮಹಾಬಲೇಶ್ವರ ಭಟ್ ಧನ್ಯವಾದಗೈದರು. ಪಿಯುಸಿ ಹಾಗೂ 10 ನೇ ತರಗತಿಯಲ್ಲಿ ಶೇ 80% ಕ್ಕೂ ಅಧಿಕ ಅಂಕಗಳಿಸಿದ 53 ವಿದ್ಯಾರ್ಥಿಗಳಿಗೆ ಅಭಿನಂದನೆ ಮಾಡಲಾಯಿತು.

astr
- Advertisement -

Related news

error: Content is protected !!