Saturday, July 25, 2026
spot_imgspot_img
spot_imgspot_img

ಗಾಯಗೊಂಡಿದ್ದ ರಾಷ್ಟ್ರೀಯ ಪಕ್ಷಿ ನವಿಲಿಗೆ ಚಿಕಿತ್ಸೆ ನೀಡಿ ರಕ್ಷಣೆ

- Advertisement -
- Advertisement -

ವಿಟ್ಲ : ಕಾಲಿಗೆ ಪೆಟ್ಟಾಗಿ ಬಿದ್ದಿದ್ದ ರಾಷ್ಟ್ರೀಯ ಪಕ್ಷಿ ನವಿಲಿಗೆ ಚಿಕಿತ್ಸೆ ನೀಡಿ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ ಘಟನೆ ವಿಟ್ಲದ ಕೋಡಪದವು ಸಮೀಪದ ಮದಕದಲ್ಲಿ ನಡೆದಿದೆ.

ತನ್ನ ತೋಟದಲ್ಲಿ ಕಾಲಿಗೆ ಪೆಟ್ಟಾಗಿ ನಡೆದಾಡಲು ಆಗದೆ ಬಿದ್ದಿದ್ದ ರಾಷ್ಟ್ರೀಯ ಪಕ್ಷಿ ನವಿಲನ್ನು ಕಂಡ ಮದಕ ಶರಫುದ್ದೀನ್ ಹಾಜಿ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸಿದ್ದೀಕ್ ಸರವು ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸಿದ್ದೀಕ್ ಸರವು ಅವರು ಝಿಯಾದ್ ಪಂಜಿಗದ್ದೆ ಮತ್ತು ರಹಿಮಾನ್ ಕುಡ್ತಮುಗೇರ್ ಅವರ ಸಹಾಯದಿಂದ ನವಿಲನ್ನು ಹಿಡಿದು ವಿಟ್ಲ ಸರಕಾರಿ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆಯ ಅರಣ್ಯ ರಕ್ಷಕ (Forest Guard) ಶೋಭಿತ್ ಅವರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.

- Advertisement -

Related news

error: Content is protected !!