Sunday, June 21, 2026
spot_imgspot_img
spot_imgspot_img

ವಿಟ್ಲ: ನವಿಲು ಬಸದಿ ವಿಟ್ಲ ಆಶ್ರಯದಲ್ಲಿ ವಿಟಿವಿ ವಿಟ್ಲ ಸಹಯೋಗದಲ್ಲಿ ಕುಟುಂಬ ಭಕ್ತಿ ಗಾನ ಸಮ್ಮಿಲನ ಅದ್ದೂರಿ ಸ್ಪರ್ಧೆ

- Advertisement -
- Advertisement -

ವಿಟ್ಲದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯದ ಸುಪ್ರಸಿದ್ದ ಗಾಯಕರ ತೀರ್ಪುಗಾರಿಕೆಯಲ್ಲಿ ನಡೆದ ಕುಟುಂಬ ಭಕ್ತಿ ಗಾನ ಸಮ್ಮಿಲನ

ಸುಧೀಕ್ಷ ಮಂಗಳೂರು ತಂಡ ಪ್ರಥಮ ಗುರುಪ್ರಿಯಾ ಕಾಮತ್ ಪುತ್ತೂರು ತಂಡ ದ್ವಿತೀಯ

ವಿಟ್ಲ: ನವಿಲು ಬಸದಿ ವಿಟ್ಲ ಆಶ್ರಯದಲ್ಲಿ ವಿಟಿವಿ ವಿಟ್ಲ ಸಹಯೋಗದಲ್ಲಿ ವಿಟ್ಲದ ಇತಿಹಾಸದಲ್ಲಿ ಪ್ರಪಥಮ ಬಾರಿಗೆ ರಾಜ್ಯದ ಸುಪ್ರಸಿದ್ದ ಗಾಯಕರ ತೀರ್ಪುಗಾರಿಕೆಯಲ್ಲಿ ಕುಟುಂಬ ಭಕ್ತಿಗಾನ ಸಮ್ಮಿಲನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಕುಟುಂಬದ ಸದಸ್ಯರಿಗಾಗಿ ಏರ್ಪಡಿಸಿದ ಈ ಸ್ಪರ್ಧೆಯಲ್ಲಿ ಮೊದಲ ಸುತ್ತಿನಲ್ಲಿ 100 ಕ್ಕಿಂತಲೂ ಅಧಿಕ ತಂಡಗಳು ತಮ್ಮ ಹಾಡನ್ನು ಹಾಡಿ ವಿಡಿಯೋ ಕಳುಹಿಸಿ ಈ ಮೂಲಕ ಸ್ಪರ್ಧೆ ಯಲ್ಲಿ ಭಾಗವಹಿಸಿದ್ದರು. ಈ ಪೈಕಿ 35 ತಂಡಗಳನ್ನು ಆಯ್ಕೆ ಮಾಡಲಾಗಿತ್ತು.

ಸೆ 5 ನೇ ಆದಿತ್ಯವಾರ ವಿಟ್ಲ ನವಿಲು ಬಸದಿಯಲ್ಲಿ ನಡೆದ ಕುಟುಂಬ ಭಕ್ತಿ ಗಾನ ಸಮ್ಮಿಲನ ಕಾರ್ಯಕ್ರಮವನ್ನು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಂಗಳೂರು ಮಾಜಿ ಸಂಸದರು ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸುದರ್ಶನ್ ಜೈನ್, ರತ್ನಾಕರ್ ಜೈನ್ ಮತ್ತು ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಜ್ಯದ ಸುಪ್ರಸಿದ್ದ ಗಾಯಕರಾದ ರವೀಂದ್ರ ಪ್ರಭು ಹಾಗೂ ಸಂಗೀತ ಬಾಲಚಂದ್ರ ಇವರ ತೀರ್ಪುಗಾರಿಕೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಎಲ್ಲಾ ತಂಡಗಳು ಭಾಗವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.

ಕುಟುಂಬ ಭಕ್ತಿಗಾನ ಸಮ್ಮಿಲನ ಸ್ಪರ್ಧೆಯಲ್ಲಿ ಸುಧೀಕ್ಷ ಮಂಗಳೂರು ಮತ್ತು ತಂಡ ಪ್ರಥಮ ಸ್ಥಾನ ಗಳಿಸಿದ್ದಾರೆ. ಗುರುಪ್ರಿಯಾ ಕಾಮತ್ ಪುತ್ತೂರು ಮತ್ತು ತಂಡ ದ್ವಿತೀಯ ಸ್ಥಾನ ಗಳಿಸಿಕೊಂಡಿದ್ದಾರೆ. ಹಾಗೂ ವಿದ್ಯಾಲಕ್ಷ್ಮಿ ಕಾಸರಗೋಡು ಮತ್ತು ತಂಡ ತೃತೀಯ ಸ್ಥಾನ ಮತ್ತು ಕಟೀಲು ಸಹೋದರಿಯರು ಚತುರ್ಥ ಸ್ಥಾನ ಪಡೆದುಕೊಂಡಿದ್ದಾರೆ. ಹಾಗೂ ಶಶಿಕಲಾ ಸಾಲೆತ್ತೂರು ತಂಡ ಐದನೇ ಸ್ಥಾನ ಹಾಗೂ ಶೃತಾ ವೇಣೂರು ಆರನೇ ಸ್ಥಾನ ಗಳಿಸಿಕೊಂಡಿದ್ದಾರೆ.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ ಸ್ಪರ್ಧಾ ವಿಜೇತರಿಗೆ ಪ್ರಥಮ ಬಹುಮಾನ: 11,111/-ರೂ., ನಗದು, ಫಲಕ, ಪ್ರಮಾಣ ಪತ್ರ, ದ್ವಿತೀಯ ಬಹುಮಾನ: 9,999/- ರೂ. ನಗದು, ಫಲಕ, ಪ್ರಮಾಣ ಪತ್ರ, ತೃತೀಯ ಬಹುಮಾನ: 7,777/- ರೂ. ನಗದು, ಫಲಕ, ಪ್ರಮಾಣ ಪತ್ರ, ನಾಲ್ಕನೇ ಬಹುಮಾನ: 4,444/- ರೂ. ನಗದು, ಫಲಕ, ಪ್ರಮಾಣ ಪತ್ರ, ಐದನೇ ಬಹುಮಾನ: 3,333/- ರೂ. ನಗದು, ಫಲಕ, ಪ್ರಮಾಣ ಪತ್ರ,ಆರನೇ ಬಹುಮಾನ: 2,222/- ರೂ. ನೀಡಿ ಅಭಿನಂದಿಸಲಾಯಿತು.

ಕರಾವಳಿಯ ಸುಪ್ರಸಿದ್ದ ನಿರೂಪಕ ಆರ್ ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ವಿಟ್ಲ ನವಿಲು ಬಸದಿಯ ಜಿತೇಶ್ ಜೈನ್, ದರ್ಶನ್ ಜೈನ್ ಹಾಗೂ ವಿಟಿವಿ ಆಡಳಿತ ನಿರ್ದೇಶಕರಾದ ರಾಮ್ ದಾಸ್ ಶೆಟ್ಟಿ, ಸುದರ್ಶನ್ ಪಡಿಯಾರ್, ಕೃಷ್ಣಯ್ಯ ವಿಟ್ಲ ಅರಮನೆ, ಡಾ. ಮಂದಾರ ಜೈನ್, ಜಯರಾಮ್ ಬಲ್ಲಾಳ್, ರಾಜೇಶ್ ವಿಟ್ಲ, ಸೀನಣ್ಣ, ಸಂತೋಷ್ ಶೆಟ್ಟಿ ಪೆಲತ್ತಡ್ಕ, ಭಾಸ್ಕರ್ ರೈ, ರಾಧಾಕೃಷ್ಣ ನಾಯಕ್, ಜಗನ್ನಾಥ್ ಸಾಲ್ಯಾನ್, ವಜ್ರ ಜ್ಯುವೆಲರ್ಸ್ ಮಾಲಕ ರವಿ ಕಾಮತ್, ಹರೀಶ್ ನಾಯಕ್, ಸುಧೀರ್ ನಾಯ್ಕ್, ರವಿ ವರ್ಮ ವಿಟ್ಲ, ಪ್ರಭಾಕರ್ ಅಮೈ, ಸೇರಿದಂತೆ ಹಲವರು ಭಾಗವಹಿಸಿದರು.

- Advertisement -

Related news

error: Content is protected !!