ವಿಟ್ಲ ಯೋಗೀಶ್ವರ ಜೋಗಿ ಮಠದ ಮಠಾಧೀಶರಿಂದ ಕಾರ್ಯಕ್ರಮದ ಉದ್ಘಾಟನೆ
ಸಾಧಕರಿಗೆ ಸನ್ಮಾನ- ಸಮಾರೋಪ ಸಮಾರಂಭ



ವಿಟ್ಲ: ಜೋಗಿ ಯುವ ಬ್ರಿಗೇಡ್ (ರಿ) ಯೋಗೀಶ್ವರ ಜೋಗಿ ಮಠ ವಿಟ್ಲ ಇದರ ದ್ವಿತೀಯ ವರ್ಷದ ಕ್ರೀಡಾ ಸಂಗಮ ಕಾರ್ಯಕ್ರಮ ವಿಠಲ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು.

ಶ್ರೀ ರಾಜಗುರು ಶ್ರದ್ಧಾನಾಥಜೀ ಮಹಾರಾಜ್ ಮಠಾಧೀಶರು, ಯೋಗೀಶ್ವರ ಮಠ ವಿಟ್ಲ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಮಠಾಧೀಶರು ಹಾಗೂ ಅತಿಥಿ ಅಭ್ಯಾಗತರು ಸೇರಿ ಐಡಿ ಹಾಗೂ ಟ್ರೋಫಿಯನ್ನು ಅನಾವರಣ ಮಾಡಿದರು.



ಶ್ಅರ್ಜುನ್ ಜೋಗಿ ಸುಳ್ಯ ಉದ್ಯಮಿಗಳು, ಸಂತೋಷ್ ಜೋಗಿ ಮಿತ್ತನಡ್ಕ ಮಾಲಕರು, ಗುರುದೇವ ಸೌಂಡ್ಸ್ & ಲೈಟ್ಸ್ ಕನ್ಯಾನ, ಶ್ರೀಮತಿ ಜಯಂತಿ ಜೋಗಿ ಕುರುಂಬಳ ಅಂಗನವಾಡಿ ಸಹಾಯಕಿ, ಬದನಾಜೆ, ಶ್ರೀಮತಿ ಯಶೋಧ ಜೋಗಿ ಮಂಗಳೂರು ಕನ್ನಡ ಉಪನ್ಯಾಸಕರು, ಸರಕಾರಿ ಪದವಿಪೂರ್ವ ಕಾಲೇಜು, ಮಂಗಳೂರು, ದಯಾನಂದ ಜೋಗಿ ಪುತ್ತೂರು ಸಂಚಾಲಕರು, ನಾಥ್ ಪಂತೀಯ ಜೋಗಿ ಸಮಾಜ ಸುಧಾರಕ ಸಂಘ, ಪುತ್ತೂರು, ಶ್ರೀಮತಿ ನಳಿನಾಕ್ಷಿ ರಾಮಚಂದ್ರ ಬದಿಯಡ್ಕ ಅಧ್ಯಕ್ಷೆ, ಜೋಗಿ ಸಮಾಜ ಸುಧಾರಕ ಮಹಿಳಾ ಸಂಘ, ಕಾಸರಗೋಡು ಜಿಲ್ಲೆ, ಶ್ರೀಮತಿ ರಾಜೇಶ್ವರಿ ಭಾಸ್ಕರ್ ಅಧ್ಯಾಪಿಕೆ, ಜಿ.ಹೆಚ್.ಎಸ್.ಎಸ್. ಶಾಲೆ ಶಿರಿಯ, ಮಂಜೇಶ್ವರ, ಶಿವರಾಮ್ ಮುಡಿಪು ನಿವೃತ್ತ ಸೈನಿಕರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಜೋಗಿ ಯುವ ಬ್ರಿಗೇಡ್(ರಿ) ವಿಟ್ಲ ಅಧ್ಯಕ್ಷ ಸಂದೀಪ್ ಸ್ವಾಗತಿಸಿದರು. ಪುನೀತ್ ಜೋಗಿ ಧನ್ಯವಾದವಿತ್ತರು. ಶ್ವೇತಾ ರವಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಮಕ್ಕಳಿಗೆ, ಮಹಿಳೆಯರಿಗೆ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.



ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ರಾಜಗುರು ಶ್ರದ್ಧಾನಾಥಜೀ ಮಹಾರಾಜ್ ಮಠಾಧೀಶರು, ಯೋಗೀಶ್ವರ ಮಠ ವಿಟ್ಲ , ಮಹೇಶ್ ಜೋಗಿ ಮಂಗಳೂರು (ನ್ಯಾಯವಾದಿಗಳು) ಅಧ್ಯಕ್ಷರು, ಒಬಿಸಿ ಮೋರ್ಚ ಭಾರತೀಯ ಜನತಾ ಪಾರ್ಟಿ, ದ.ಕ.ಜಿಲ್ಲೆ, ಪ್ರಭಾಕರ್ ಜೋಗಿ ಶಕ್ತಿನಗರ-ಮಂಗಳೂರು ಮಾಲಕರು, ಪಿ.ಯು.ಕಪ್ಸ್ ಇಂಡಸ್ಟ್ರೀಸ್ ಮಂಗಳೂರು, ಪ್ರಕಾಶ್ ಜೆ. ಜೋಗಿ ಮಂಗಳೂರು ನಿವೃತ್ತ ಬ್ಯಾಂಕ್ ಉದ್ಯೋಗಿ, ಗಂಗಾಧರ ಜೋಗಿ ಮಳಲಿಮಟ್ಟಿ ಆಡಳಿತ ಮೊಕ್ತೇಸರರು, ಮಳಲಿಮಟ್ಟಿ ದೇವಸ್ಥಾನ ಕೈಕಂಬ, ರವಿ ಕುಮಾರ್ ಜೋಗಿ ವಿಟ್ಲ ಅಧ್ಯಕ್ಷರು, ಜೋಗಿ ಸಮಾಜ ಸುಧಾರಕ ಸಂಘ, ಜೋಗಿಮಠ-ವಿಟ್ಲ, ಶರತ್ ಜೋಗಿ ಕಿನ್ನಿಗೋಳಿ ಅಧ್ಯಕ್ಷರು, ಜೋಗಿ ಯುವ ವೇದಿಕೆ ಮಂಗಳೂರು ಮತ್ತು ಅಧ್ಯಕ್ಷರು, ಕಾರ್ಮಿಕರ ಸಂಘ ಎಂಆರ್‌ಪಿಎಲ್ ಮಂಗಳೂರು, ಶಿವರಾಮ್ ಬಳೆಗಾರು ಮುರುಡೇಶ್ವರ ಅಲೆಮಾರಿ ಮತ್ತು ಅಲೆ ಅಲೆಮಾರಿ ನಿಗಮದ ರಾಜ್ಯ ಘಟಕದ ಸದಸ್ಯರು, ಸತೀಶ್ ಮಾಲೇಮಾರ್ ಅಧ್ಯಕ್ಷರು, ಜೋಗಿ ಸಮಾಜ ಸುಧಾರಕ ಕೋ.ಆಪರೇಟಿವ್ ಬ್ಯಾಂಕ್ ಮಂಗಳೂರು, ರಾಧಾಕೃಷ್ಣ ಜೋಗಿ ವಳಾಲು ಸಹಾಯಕ ಪೋಲಿಸ್ ಉಪನಿರೀಕ್ಷಕರು, ಸುರತ್ಕಲ್ ಮಂಗಳೂರು, ಡಾ| ಐಶ್ವರ್ಯ ವಿಟ್ಲ ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕನ್ಯಾನ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ




ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಮೇಶ್ ಜೋಗಿ ಮಿತ್ತನಡ್ಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಜೋಗಿ ಪಾವೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಪಾಲ ಜೋಗಿ ಕಾಪುಮಜಲು ಡಾ| ನಿಶಿತ್ ಕುಮಾರ್ ಜೋಗಿ ಬುಳೇರಿಕಟ್ಟೆ Phd. (ಡಾಕ್ಟರೇಟ್ ಪದವೀದರರು), ಕು| ಆಶಿಕಾ ಕನ್ಯಾನ ಅಂ ಪದವೀದರರು, ಕು| ವಿದುಷಿ ಹರ್ಷಿತ ಬದಿಯಡ್ಕ (ಭರತನಾಟ್ಯ ವಿದುಷಿ), ಕು| ದೀಕ್ಷ ಜೋಗಿ ಡೆಪ್ಪಿಣಿ (PU-98%) ಕು| ದೀಕ್ಷ ಜೋಗಿ ಮಾಣಿಬೆಟ್ಟು (SSLC- 98%) ಇವರನ್ನು ಗೌರವಿಸಿ ಅಭಿನಂದಿಸಲಾಯಿತು.



ಜೋಗಿ ಯುವ ಬ್ರಿಗೇಡ್ ನ ಅಧ್ಯಕ್ಷರಾದ ಸಂದೀಪ್ ಜೋಗಿ ವಿಟ್ಲ ಇವರ ಸಭಾಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀಮತಿ ಸೌಮ್ಯ ಕೊಡಂಗಾಯಿ ಸ್ವಾಗತಿಸಿದರು. ರವಿಕುಮಾರ್ ಆರ್ ಎಸ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನವೀನ್ ಚಂದ್ರ ವಿಟ್ಲ ಧನ್ಯವಾದವಿತ್ತರು.
ಕಾರ್ಯಕ್ರಮದಲ್ಲಿ ಜೋಗಿ ಯುವ ಬ್ರಿಗೇಡ್(ರಿ) ಇದರ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವಸದಸ್ಯರು ಸೇರಿದಂತೆ ಸ್ವಜಾತಿ ಬಾಂಧವರು ಉಪಸ್ಥಿತರಿದ್ದರು.










