Saturday, July 25, 2026
spot_imgspot_img
spot_imgspot_img

ವಿಟ್ಲ: (ಮೇ.16) ಧರ್ಮಜಾಗೃತಿ ಹಾಗೂ ಲೋಕಕಲ್ಯಾಣಾರ್ಥವಾಗಿ ಅರ್ಧಏಕಾಹ ಭಜನೆ ಹಾಗೂ ಸಾಮೂಹಿಕ ಶ್ರೀ ದುರ್ಗಾನಮಸ್ಕಾರ ಪೂಜೆ

- Advertisement -
- Advertisement -

ವಿಟ್ಲ: ಸಾರ್ವಜನಿಕ ಶ್ರೀ ದುರ್ಗಾಪೂಜಾ ಸಮಿತಿ ವಿಟ್ಲ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಿಟ್ಲ ಘಟಕ ಇದರ ಸಾರಥ್ಯದಲ್ಲಿ ಧರ್ಮಜಾಗೃತಿ ಹಾಗೂ ಲೋಕಕಲ್ಯಾಣಾರ್ಥವಾಗಿ ಅರ್ಧಏಕಾಹ ಭಜನೆ ಹಾಗೂ ಸಾಮೂಹಿಕ ಶ್ರೀ ದುರ್ಗಾನಮಸ್ಕಾರ ಪೂಜೆಯು ಮೇ.16-5 -2025 ನೇ ಶುಕ್ರವಾರ ಮಹತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.

ಬೆಳಿಗ್ಗೆ 6:00 ರಿಂದ 7:00 – ಶ್ರೀ ಶಾರದಾಂಬಾ ಭಜನಾ ಮಂದಿರ ಅಳಕೆಮಜಲು
ಬೆಳಿಗ್ಗೆ7:00 ರಿಂದ 8:00 – ಶ್ರೀ ಷಣ್ಮುಖ ಸುಬ್ರಹ್ಮಣ್ಯ ಯುವಕ ಮಂಡಲ ಕೋಲ್ಪೆ
ಬೆಳಿಗ್ಗೆ 8:00 ರಿಂದ 9:00 -ವಿಶ್ವನಾಥ ದೇವಾಡಿಗ ಭಜನಾ ಬಳಗ ವಿಟ್ಲ
ಬೆಳಿಗ್ಗೆ 9:00 ರಿಂದ 10:00 – ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಮಾಮೇಶ್ವರ
ಬೆಳಿಗ್ಗೆ 10:00 ರಿಂದ 11:00 -ಶ್ರೀ ನಾಗಬ್ರಹ್ಮ ರಕೇಶ್ವರಿ ಭಜನಾ ಮಂಡಳಿ ಕಾಮಟ
ಬೆಳಿಗ್ಗೆ 11:00 800 12:00 -ಶ್ರೀ ರಾಮ ಮಂದಿರ ಭಜನಾ ಮಂಡಳಿ ಹನುಮಗಿರಿ ವಿಟ್ಲ
ಮಧ್ಯಾಹ್ನ 12:00 ರಿಂದ 1:00 – ಶ್ರೀ ವಿಷ್ಣುಮೂರ್ತಿ ಭಜನಾ ಸಮಿತಿ ವಿಷ್ಣುನಗರ ಕುಂಡಡ್ಕ
ಮಧ್ಯಾಹ್ನ 1:00 ರಿಂದ 2:00 -ಶ್ರೀ ಧರ್ಮಶಿಕ್ಷಣ ಸಮಿತಿ ರಕೇಶ್ವರಿ ಘಟಕ ಇರಂದೂರು
ಮಧ್ಯಾಹ್ನ 2:00 ರಿಂದ 3:00 -ಶ್ರೀ ಪಂಚಲಿಂಗೇಶ್ವರ ಮಹಿಳಾ ಭಜನಾ ತಂಡ ವಿಟ್ಲ
ಮಧ್ಯಾಹ್ನ 3:00 ರಿಂದ 4:00 – ಎಸ್.ಕೆ.ಎಸ್ ಭಜನಾ ತಂಡ ಸುರುಳಿಮೂಲೆ
ಸಂಜೆ 4:00 ರಿಂದ 5:00 -ಶ್ರೀ ಸ್ಕಂದ ಕುಣಿತ ಭಜನಾ ತಂಡ ಅಳಿಕೆ
ಸಂಜೆ 5:00 ರಿಂದ 6:00 -ಆರ್.ಕೆ ಆರ್ಟ್ಸ್ ಕುಣಿತಾ ಭಜನಾ ತಂಡ ವಿಟ್ಲ
ಬೆಳಿಗ್ಗೆ 6:00 ರಿಂದ ಸಂಜೆ 6:00ರವರೆಗೆ ವಿವಿಧ ಭಜನಾ ತಂಡಗಳಿಂದ ಅರ್ಧಏಕಾಹ ಭಜನೆ ನಡೆಯಲಿದೆ. ಸಂಜೆ 4:00ಕ್ಕೆ ಶ್ರೀ ದುರ್ಗಾನಮಸ್ಕಾರ ಪೂಜೆ ನಡೆಯಲಿದೆ.

ಸಂಜೆ 7:00ಕ್ಕೆ ಶ್ರೀಕೃಷ್ಣ ಕೇಪು ವಕೀಲರು ವಿಟ್ಲ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಬಂಗಾರು ಅರಸರು ವಿಟ್ಲ ಅರಮನೆ ಇವರು ಉದ್ಘಾಟಸಲಿದ್ದಾರೆ. ಸಾದ್ವಿ ಶ್ರೀ ಶ್ರೀ ಮಾತಾನಂದಮಯಿ ಶ್ರೀಕ್ಷೇತ್ರ ಒಡಿಯೂರು ಆಶೀರ್ವಚನ ನೀಡಲಿರುವರು. ಹಿಂದೂ ಧಾರ್ಮಿಕ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಧಾರ್ಮಿಕ ಉಪನ್ಯಾಸ ನೀಡಲಿರುವರು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ). ಪುತ್ತೂರು ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಅಧ್ಯಕ್ಷ ಮಹೇಂದ್ರ ವರ್ಮ, ಗ್ರಾಮೀಣ ಸಹಕಾರಿ ಬ್ಯಾಂಕ್ ನಿ. ವಿಟ್ಲಅಧ್ಯಕ್ಷ ಜಗನ್ನಾಥ ಸಾಲ್ಯಾನ್ ವಿಟ್ಲ, ಅಳಿಕೆ ಪ್ರಾ. ಕೃ ಪತ್ತಿನ ಸಹಕಾರಿ ಸಂಘ ನಿರ್ದೇಶಕ ಈಶ್ವರ ಭಟ್ ಕಾನ, ಶ್ರೀಧರ ಶೆಟ್ಟಿ ಗುಬ್ಯ ಮೇಗಿನಗುತ್ತು, ವಿಟ್ಟಲ್ ಕನ್‌ಸ್ಟ್ರಕ್ಷನ್ ವಿಟ್ಲ ಸುರೇಶ್ ಬನಾರಿ, ಸಾನ್ವಿ ಕನ್ ಸ್ಟ್ರಕ್ಷನ್ ವಿಟ್ಲ ತಾರಾನಾಥ ಬೋಳಿಗದ್ದೆ, ಉದ್ಯಮಿ ರಾಜೇಶ್ ತೋಡ್ಲಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರರು.

ರಾತ್ರಿ 8:00ಕ್ಕೆ ಪ್ರಸಾದ ವಿತರಣೆ ನಡೆದು ಬಳಿ ಅನ್ನಸಂತರ್ಪಣೆ ನಡೆಯಲಿದೆ.

- Advertisement -

Related news

error: Content is protected !!