- Advertisement -
- Advertisement -
ಹನುಮಗಿರಿ ಮೇಳದ ಪ್ರಧಾನ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ ಇವರ ಭಾಗವತಿಕೆಗೆ 25 ವರ್ಷ!!



ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಅವಭೃಥ ಸ್ನಾನ ಕಟ್ಟೆ ಸಮಿತಿ ಮೂರ್ಕಜೆ-ಮಂಟಮೆ ಗದ್ದೆ ಇದರ ವತಿಯಿಂದ ಶ್ರಿ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಮೇಳದ ಪ್ರಧಾನ ಭಾಗವತರಾದ ರವಿಚಂದ್ರ ಕನ್ನಡಿ ಕಟ್ಟೆ ಇವರ ಭಾಗವತಿಕೆಗೆ 25 ವರ್ಷ ತುಂಬಿದ ಸಂದರ್ಭದಲ್ಲಿ ಅವರನ್ನು ಗೌರವಿಸಲಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ,ಯಕ್ಷಗಾನ ಪ್ರೋತ್ಸಾಹಕರಾದ ಸುಂದರ್ ಶೆಟ್ಟಿ ಚೆಂಬರಡ್ಕ, ವಿಟ್ಲ ಅರಮನೆ ರಾಜಾರಾಮ ವರ್ಮ, ಕಟ್ಟೆ ಸಮಿತಿ ಅಧ್ಯಕ್ಷ ಕಾನ ಉದಯ ಭಟ್, ಮೈತ್ರೇಯಿ ಗುರುಕುಲದ ಜಗನ್ನಾಥ ಕಾಸರಗೋಡು, ಹಾಗೂ ವಿಟ್ಲ ಪಡ್ನೂರು ಸಹಕಾರಿ ಸಂಘದ ಉಪಾಧ್ಯಕ್ಷ ರವಿಶ್ ಶೆಟ್ಟಿ ಕರ್ಕಳ ಇವರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.
- Advertisement -








