




ವಿಟ್ಲ: ವಿಟ್ಠಲ ಎಜುಕೇಶನ್ ಸೊಸೈಟಿ ಇದರ ಪದವಿ ಪೂರ್ವ ಕಾಲೇಜು ಮತ್ತು ವಿಟ್ಠಲ ಸುಪ್ರಜಿತ್ ಐಟಿಐಯ ವಾರ್ಷಿಕೋತ್ಸವ ಸುವರ್ಣ ರಂಗ ಮಂದಿರದಲ್ಲಿ ವಿಟ್ಠಲ ಎಜುಕೇಶನ್ ಸೊಸೈಟಿ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆ ವಲಯ ಆಯುಕ್ತೆ ವಾಣಿ ವಿ ಆಳ್ವ ಮತ್ತು ವಿಜಯ ಬ್ಯಾಂಕ್ ನಿವೃತ್ತ ಪ್ರಬಂಧಕ ಪ್ರಭಾಕರ ಆಳ್ವ ಇವರು ಭಾಗವಹಿಸಿದ್ದರು. ವಿಟ್ಠಲ ಎಜುಕೇಶನ್ ಸೊಸೈಟಿ ಸಂಚಾಲಕ ರಾಧಾಕೃಷ್ಣ ನಾಯಕ್, ಕಾರ್ಯದರ್ಶಿ ಶಂಕರನಾರಾಯಣ ಪ್ರಸಾದ್ ಸದಸ್ಯ ನಿತ್ಯಾನಂದ ನಾಯಕ್, ಆಡಳಿತ ಅಧಿಕಾರಿ ಪ್ರಶಾಂತ್ ಚೊಕ್ಕಾಡಿ, ಉಪಪ್ರಾಂಶುಪಾಲ ಕಿರಣ್ ಕುಮಾರ್ ಬ್ರಹ್ಮಾವರ, ಸುದರ್ಶನ ಪಡಿಯಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಭಾಕರ ಆಳ್ವಮಾತನಾಡಿ “ವಿದ್ಯಾರ್ಥಿಗಳು ತಮ್ಮ ಓದಿನ ಕಾಲವನ್ನು ತಪಸ್ಸಿನಹಾಗೆ ಮಾಡಿಕೊಂಡರೆ ಮುಂದಿನ ನಿಮ್ಮ ಜೀವನ ಹೂವಿನ ಹಾಸಿಗೆ ಆಗುತ್ತದೆ.ತಮ್ಮ ವಿದ್ಯಾರ್ಥಿ ಜೀವನದಲ್ಲಿ ಮನರಂಜನೆ ಗೆ ಹೆಚ್ಚು ಒತ್ತು ಕೊಟ್ಟರೆ ನಿಮ್ಮ ಮುಂದಿನ ಜೀವನ ಮುಳ್ಳಿನ ಹಾಸಿಗೆ ಆಗುತ್ತದೆ.” ಎಂದು ಹೇಳಿದರು.
ಕಾರ್ಯಕ್ರಮವನ್ನು ಕೋಶಾಧಿಕಾರಿ ಬಾಬು ಕೊಪ್ಪಳ ಸ್ವಾಗತಿಸಿದರು. ಸವಿತಾ ವಂದಿಸಿದರು. ಜಲಜಾಕ್ಷಿ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ ಗೌಡ ಸಹಕರಿಸಿದರು. ಪ್ರಾಂಸುಪಾಲ ಚೊಕ್ಕಾಡಿ ಮತ್ತು ಐಟಿಐ ಪ್ರಾಂಶುಪಾಲ ರಮೇಶ್ ರೈ ವರದಿ ವಾಚಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟಕ್ಕೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಾದ ಪ್ರಖ್ಯಾತ್ ಪಿ ಆರ್ , ವಂದನ್ ಕೆ ಶೆಟ್ಟಿ, ವಿಜಿತ್ ಬಾಬು ಎಸ್, ಇಶಾನ್ ಕರಿಯಪ್ಪ ಮತ್ತು ಮೇಘನಾ ಇವರನ್ನು ಗೌರವಿಸಲಾಯಿತು. ಮತ್ತು ದತ್ತುನಿಧಿ ಬಹುಮಾನ ವಿತರಿಸಲಾಯಿತು. ಹಾಗೂ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.










