Sunday, July 19, 2026
spot_imgspot_img
spot_imgspot_img

ವಿಟ್ಲ: ವಿಟ್ಠಲ ಎಜುಕೇಶನ್ ಸೊಸೈಟಿ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವ

- Advertisement -
- Advertisement -

ವಿಟ್ಲ: ವಿಟ್ಠಲ ಎಜುಕೇಶನ್ ಸೊಸೈಟಿ ಇದರ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವ ವಿಟ್ಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಮೈಸೂರು ಪ್ರೀಮಿಯರ್‌ ಇಲ್ಯುಮಿನೇಶನ್‌ನ ಮ್ಯಾನೇಜಿಂಗ್ ಪಾರ್ಟ್ ನರ್ ಜಾರ್ಜ್ ಪಿಂಟೊ ಉದ್ಘಾಟಿಸಿದರು. ವಿಟ್ಠಲ ಎಜುಕೇಶನ್ ಸೊಸೈಟಿ ಸಂಚಾಲಕ ರಾಧಾಕೃಷ್ಣ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಂಗಳೂರು ಸೈಂಟ್ ಅಲೋಶಿಯಸ್ ಡಿಪಾರ್ಟ್ಮೆಂಟ್ ಆಫ್ ಸೋಶಿಯಲ್ ವರ್ಕ್ ಇದರ ಅಸೋಸಿಯೇಟ್ ಪ್ರೊಫೆಸರ್ ಮತ್ತು ಮುಖ್ಯಸ್ಥೆ ಡಾ. ಶ್ವೇತಾ ರಸ್ಕಿನ್ಹಾ ಇವರು ಭಾಗವಹಿಸಿದ್ದರು.

ಕೋಶಾಧಿಕಾರಿ ಬಾಬು ಕೊಪ್ಪಳ, ಸದಸ್ಯರಾದ ನಿತ್ಯಾನಂದ ನಾಯಕ್, ರವಿಪ್ರಕಾಶ್, ಪ್ರಿನ್ಸಿಪಾಲ್ ಆದರ್ಶ ಚೊಕ್ಕಾಡಿ, ಐಟಿಐ ಪ್ರಿನ್ಸಿಪಾಲ್ ರಮೇಶ್ ರೈ, ವಿದ್ಯಾರ್ಥಿ ನಾಯಕಿ ಸಮೀಬಿಯಾ ಮತ್ತು ಕಾರ್ಯದರ್ಶಿ ಶಮಾ ವೇದಿಕೆಯಲ್ಲಿದ್ದರು. ವಿಟ್ಠಲ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಶಂಕರನಾರಾಯಣ ಪ್ರಸಾದ್ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಕಿರಣ್ ಕುಮಾರ್ ಬ್ರಹ್ಮಾವರ ವರದಿ ವಾಚಿಸಿದರು. ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ವಂದಿಸಿದರು. ಮುಕ್ತಾ ನಿರೂಪಿಸಿದರು. ಗೀತಾ, ಮೋಹನ್, ವಾಣಿ ವಿ, ಆಶಾ, ಅರುಣಾ, ಜೀವಣ್ಯ, ವಾಣಿ ಬಿ ಮತ್ತು ವೀಣಾದೇವಿ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು.

- Advertisement -

Related news

error: Content is protected !!