Wednesday, July 22, 2026
spot_imgspot_img
spot_imgspot_img

ವಿಟ್ಲ: ಸಾರ್ವಜನಿಕರಿಗೆ ಕಣ್ಣಿನ ಉಚಿತ ಚಿಕಿತ್ಸಾ ಶಿಬಿರ

- Advertisement -
- Advertisement -

ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ, ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ವಿಟ್ಲ ಅಕ್ಷಯ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯ, ಪುತ್ತೂರು ಅಶ್ವಿನ್ ಕಣ್ಣಿನ ಚಿಕಿತ್ಸಾಲಯ ರೋಟರಿ ಕ್ಲಬ್ ವಿಟ್ಲ ಹಾಗೂ ಯೇನೆಪೋಯ ಮೆಡಿಕಲ್ ಕಾಲೇಜು ಹಾಸ್ಪಿಟಲ್ ದೇರಳಕಟ್ಟೆ ಮಂಗಳೂರು ಇದರ ತಜ್ಞ ವೈದ್ಯರಿಂದ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಮಾರ್ಗದರ್ಶನದಲ್ಲಿ ಸಾರ್ವಜನಿಕರಿಗೆ ಕಣ್ಣಿನ ಉಚಿತ ಚಿಕಿತ್ಸಾ ಶಿಬಿರ ವಿಟ್ಲ ಶಾಂತಿನಗರ ಅಕ್ಷಯ ಸಭಾ ಭವನದಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಪುತ್ತೂರು ಅಶ್ವಿನ್ ಕಣ್ಣಿನ ಚಿಕಿತ್ಸಾಲಯದ ಕಣ್ಣು ಚಿಕಿತ್ಸಕ ಶಾಂತರಾಜ್ ಉದ್ಘಾಟಿಸಿದರು. SKPA ಬಂಟ್ವಾಳ ವಲಯದ ಅಧ್ಯಕ್ಷ ರಾಜೇಂದ್ರ ಕೆ, ಕೋಶಾಧಿಕಾರಿ ಕೃಷ್ಣರಾಜ ರಾವ್, ಮಾಜಿ ಅಧ್ಯಕ್ಷ ಹರೀಶ್ ಕುಂದರ್, ಜಿಲ್ಲಾ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಗೋಪಾಲಕೃಷ್ಣ, ಗೌಡರ ಯಾನೆ ಒಕ್ಕಲಿಗರ ಸಂಘ ಯುವ ವೇದಿಕೆ ಅಧ್ಯಕ್ಷ ದಿನೇಶ್ ಮಾಡ್ತೇಲು, ಮಹಿಳಾ ವೇದಿಕೆ ಅಧ್ಯಕ್ಷೆ ಅಮಿತಾ ಗೋಪಾಲಕೃಷ್ಣ, ಯೇನೆಪೋಯ ಮೆಡಿಕಲ್ ಕಾಲೇಜು, ಆಸ್ಪತ್ರೆಯ ಡಾ. ಶರ್ಮಿಳಾ, ಡಾ. ನಾಗರಾಜ್ ಶೇಟ್, ಮಾರ್ಕೆಟಿಂಗ್ ವಿಭಾಗದ ವಿಜಯಾನಂದ ಶೆಟ್ಟಿ, ಅಶ್ವಿನ್ ಕಣ್ಣಿನ ಚಿಕಿತ್ಸಾಲಯ ದ ಡಾ. ಎಸ್ ಎಂ ಅಶ್ವಿನ್ ಸಾಗರ್, ಎಸ್ ಎಂ ವಿಕಾಸ್ ಒಕ್ಕಲಿಗರ ಸಂಘದ ಮೋಹನ್ ಕಾಯರ್ ಮಾರ್, ಲಿಂಗಪ್ಪ ಗೌಡ, ಅಕ್ಷಯ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಸಿ ಇ ಒ ಗೌತಮ್, ವಿಟ್ಲ ಸಮುದಾಯ ಆಸ್ಪತ್ರೆಯ ಚೈತ್ರ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಒಕ್ಕಲಿಗರ ಯಾನೆ ಗೌಡರ ಸಂಘದ ಅಧ್ಯಕ್ಷ ಸಿಕೆ ಗೌಡ ಸ್ವಾಗತಿಸಿದರು. ಕಾರ್ಯದರ್ಶಿ ವಿಶ್ವನಾಥ ಗೌಡ ವಂದಿಸಿ ನಿರೂಪಿಸಿದರು.

- Advertisement -

Related news

error: Content is protected !!