Sunday, June 7, 2026
spot_imgspot_img
spot_imgspot_img

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿಯಲಿದೆ ವಾರಾಂತ್ಯದ ಕರ್ಫ್ಯೂ; ಜಿಲ್ಲಾಧಿಕಾರಿ ಸ್ಪಷ್ಟನೆ

- Advertisement -
- Advertisement -

ಮಂಗಳೂರು: ಶುಕ್ರವಾರ (ನಾಳೆ) ಸಂಜೆಯಿAದ ಸೋಮವಾರ ಮುಂಜಾನೆ ಏಳು ಗಂಟೆಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಇರಲಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಸ್ಪಷ್ಟನೆ ನೀಡಿದ್ದಾರೆ.

ಅತ್ಯಗತ್ಯ ಹಾಲು, ಮೆಡಿಕಲ್, ವೈದ್ಯಕೀಯ ಹಾಗೂ ತುರ್ತು ಸೇವೆ ಹೊರತುಪಡಿಸಿ ಬೇರೆಲ್ಲಾ ಚಟುವಟಿಕೆಗೆ ಅವಕಾಶ ಇರುವುದಿಲ್ಲ. ಎಲ್ಲಾ ರೀತಿಯ ಅಂಗಡಿ ಮುಂಗಟ್ಟು, ಮದ್ಯ ಮಾರಾಟ, ತರಕಾರಿ ಮಾರಾಟ ಸೇರಿದಂತೆ ವಿವಿಧ ಚಟುವಟಿಕೆಗೆ ಮತ್ತೆ ಬ್ರೇಕ್ ಹಾಕಲಾಗಿದೆ.

ಶುಕ್ರವಾರ ಸಂಜೆ 7 ಗಂಟೆಯಿ0ದ ಸೋಮವಾರ ಮುಂಜಾನೆ 7ರ ತನಕ ಜಿಲ್ಲೆಯಾದ್ಯಂತ ಕಠಿಣ ಕರ್ಫ್ಯೂ ಜಾರಿಯಲ್ಲಿರುತ್ತದೆ. ಕರ್ಫ್ಯೂ ಉಲ್ಲಂಘಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ರವಾನಿಸಿದ್ದಾರೆ.

- Advertisement -

Related news

error: Content is protected !!