Tuesday, July 21, 2026
spot_imgspot_img
spot_imgspot_img

ಮೊಬೈಲ್ ಫೋನ್ ವಿಚಾರಕ್ಕೆ ಜಗಳ: ಓರ್ವನ ಕೊಲೆ

- Advertisement -
- Advertisement -

ಬೆಂಗಳೂರು: ಮೊಬೈಲ್‌ಫೋನ್ ವಿಚಾರಕ್ಕೆ ಸ್ನೇಹಿತನಿಂದ ಹಲ್ಲೆಗೊಳಗಾದ ಯುವಕ ಮೃತಪಟ್ಟಿರುವ ಘಟನೆ ಮಾರತ್‌ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.ಮೇ 10ರಂದು ಘಟನೆ ನಡೆದಿದ್ದು, ಸ್ನೇಹಿತ ರಾಮು ಎಂಬಾತನಿಂದ ಚಾಕು ಇರಿತಕ್ಕೊಳಗಾಗಿದ್ದ ಪರಶುರಾಮ ಎಲ್ಲಪ್ಪ ಮಂಗಳಗಟ್ಟಿ(25) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುಬ್ಬಳ್ಳಿ ಮೂಲದ ಪರಶುರಾಮ ಹಾಗೂ ರಾಮು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದರು. ಮಾರತ್‌ಹಳ್ಳಿ ಠಾಣೆ ವ್ಯಾಪ್ತಿಯ ಚೌಡೇಶ್ವರಿ ರಸ್ತೆಯಲ್ಲಿನ ಬೆಸ್ಕಾಂ ಕಚೇರಿ ಬಳಿ ಬಾಡಿಗೆ ರೂಮ್‌ನಲ್ಲಿ ವಾಸವಿದ್ದರು. ಮೇ 10ರಂದು ನೈಟ್ ಶಿಫ್ಟ್ ಮುಗಿಸಿ, ಪಾನಮತ್ತನಾಗಿ ಬಂದಿದ್ದ ರಾಮು, ಪರಶುರಾಮನ ಮೊಬೈಲ್ ಫೋನ್ ಬಚ್ಚಿಟ್ಟಿದ್ದ.ಎಚ್ಚರವಾದ ಬಳಿಕ ‘ಮೊಬೈಲ್ ಎಲ್ಲಿಟ್ಟಿದ್ದೀಯಾ, ಕೊಡು’ ಎಂದು ಪರಶುರಾಮ ಕೇಳಿದ್ದ. ಈ ವೇಳೆ, ರಾಮು ಮೊಬೈಲ್ ಕೊಡಲ್ಲ ಎಂದಿದ್ದಕ್ಕೆ ಇಬ್ಬರ ನಡುವೆ ವಾಗ್ವಾದವಾಗಿತ್ತು. ಸಿಟ್ಟಿಗೆದ್ದ ರಾಮು, ಅಡುಗೆ ಕೋಣೆಯಿಂದ ಚಾಕು ತಂದು ಪರಶುರಾಮನಿಗೆ ಇರಿದಿದ್ದ. ಬಳಿಕ ಆತನ ಮೊಬೈಲ್‌ ತೆಗೆದುಕೊಂಡು ಪರಾರಿಯಾಗಿದ್ದ.

ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದವನನ್ನು ಅಕ್ಕಪಕ್ಕದವರು ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದರು.ನಂತರ ಕುಟುಂಬಸ್ಥರು ಪರಶುರಾಮನನ್ನು ಹುಬ್ಬಳ್ಳಿಗೆ ಕರೆದೊಯ್ದಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯಲ್ಲಿ ಪರಶುರಾಮ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ. ಮೃತನ ಸಹೋದರ ಗಂಗಪ್ಪ ಎಂಬುವರಿಂದ ದೂರು ಪಡೆದ ಮಾರತ್‌ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಸದ್ಯ ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

- Advertisement -

Related news

error: Content is protected !!