Wednesday, July 22, 2026
spot_imgspot_img
spot_imgspot_img

ಟಾಟಾ ಸಿಯೆರಾ ಟೆಸ್ಟ್ ಡ್ರೈವ್ ಮಾಡಿದ ಮಹಿಳೆ : ನಿಯಂತ್ರಣ ತಪ್ಪಿ ಪಾತಾಳಕ್ಕೆ ಬಿದ್ದ ಕಾರು !

- Advertisement -
- Advertisement -

ಮುಂಬೈ: ಮಹಿಳೆಯೊಬ್ಬರು ಹೊಸ ಟಾಟಾ ಸಿಯೆರಾ ಕಾರಿನ ಟೆಸ್ಟ್ ಡ್ರೈವ್ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿ ಮೂರು ವಾಹನಗಳಿಗೆ ಡಿಕ್ಕಿ ಹೊಡೆದು, ನಂತರ ಸುಮಾರು 20 ಅಡಿ ಆಳದ ನಿರ್ಮಾಣ ಹಂತದ ಗುಂಡಿಗೆ ಕಾರು ಬಿದ್ದಿರುವ ಭೀಕರ ಅಪಘಾತ ಮುಂಬೈಯಲ್ಲಿ ನಡೆದಿದೆ.

ಟೆಸ್ಟ್ ಡ್ರೈವ್ ವೇಳೆ ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡ ಮಹಿಳೆ, ರಸ್ತೆಯ ಬದಿಯಲ್ಲಿದ್ದ ಒಂದು ಆಟೋ ರಿಕ್ಷಾ ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ನಂತರ ಕಾರು ಬ್ಯಾರಿಕೇಡ್, ತಡೆಗೋಡೆಗಳನ್ನು ಮುರಿದು 20 ಅಡಿ ಆಳದ ಗುಂಡಿಗೆ ಬಿದ್ದಿದೆ.

ಮಹಿಳೆ ತನ್ನ ಸಂಬಂಧಿಕರೊಂದಿಗೆ ಕಾರು ಖರೀದಿಗೆ ಆಗಮಿಸಿದ್ದಾರೆ. ಈ ವೇಳೆ ಟೆಸ್ಟ್ ಡ್ರೈವ್ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಸಂಬಂಧಿಕರನ್ನು ಕೂರಿಸಿಕೊಂಡು ಟೆಸ್ಟ್ ಡ್ರೈವ್‌ಗೆ ತೆರಳಿದ್ದಾರೆ. ಇದೇ ವೇಳೆ ಶೋ ರೂಂ ಸಿಬ್ಬಂದಿಯೂ ಕಾರಿನಲ್ಲಿ ಕುಳಿತಿದ್ದಾರೆ. ಕಾರಿನ ಬಗ್ಗೆ ಮಾಹಿತಿ ನೀಡಲು ಆರಂಭಿಸಿದ ಬೆನ್ನಲ್ಲೇ ಮಹಿಳೆ ಕಾರು ಸ್ಟಾರ್ಟ್ ಮಾಡಿ ಮೂವ್ ಮಾಡಿದ್ದಾರೆ. ರಸ್ತೆಗೆ ಇಳಿದ ತಕ್ಷಣ ಕಾರು ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದೆ ಎನ್ನಲಾಗಿದೆ.

ಅದೃಷ್ಟವಶಾತ್ ಕಾರಿನ ಏರ್‌ಬ್ಯಾಗ್‌ಗಳು ಸಮಯಕ್ಕೆ ಸರಿಯಾಗಿ ತೆರೆದುಕೊಂಡಿದ್ದರಿಂದ ಮತ್ತು ಕಾರಿನ ಗಟ್ಟಿಮುಟ್ಟಾದ ವಿನ್ಯಾಸದಿಂದಾಗಿ ಕಾರಿನಲ್ಲಿದ್ದ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದ್ವಿಚಕ್ರ ವಾಹನ ಹಾಗೂ ಒಂದು ಆಟೋ ರಿಕ್ಷಾ ಸಂಪೂರ್ಣ ನಜ್ಜು ಗುಜ್ಜಾಗಿದೆ. ಇತ್ತ ಪೊಲೀಸರು ಪರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!