Tuesday, July 28, 2026
spot_imgspot_img
spot_imgspot_img

ಅಪ್ಪನ ಅಕ್ರಮ ಸಂಬಂಧ ಬಯಲು ಮಾಡಿದ ಮಗಳು- ಸಂಸಾರದಲ್ಲಿ ಬಿರುಕು

- Advertisement -
- Advertisement -

ಮಂಡ್ಯ: ಆನ್ ಲೈನ್ ಕ್ಲಾಸ್’ಗೆ ಹಾಜರಾಗಲು ಅಪ್ಪನಿಂದ ಪಡೆದ ಮೊಬೈಲ್ ನಲ್ಲಿದ್ದ ರಾಸಲೀಲೆ ವಿಡಿಯೋ ಸಂಸಾರದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಮಗಳು ಆನ್ ಲೈನ್ ಶಿಕ್ಷಣಕ್ಕಾಗಿ ಅಪ್ಪನ ಮೊಬೈಲ್ ಪಡೆದುಕೊಂಡಿದ್ದ ವೇಳೆ ಅಪ್ಪನ ರಾಸಲೀಲೆಯ ಕರ್ಮಕಾಂಡ ಮೊಬೈಲ್ ನಲ್ಲಿ ಪತ್ತೆಯಾಗಿದೆ. ಮಗಳು ತನ್ನ ಆನ್ ಲೈನ್ ಕ್ಲಾಸ್ ಗಾಗಿ ಅಪ್ಪನ ಮೊಬೈಲ್ ಪಡೆದುಕೊಂಡಿದ್ದಾಳೆ. ಈ ವೇಳೆ ಮೊಬೈಲ್ ಗ್ಯಾಲರಿಯಲ್ಲಿ ಅಪ್ಪನ ಲವ್ವಿಡವ್ವಿ ವಿಡಿಯೋ ಬಯಲಾಗಿದೆ. ಇದನ್ನು ನೋಡಿ ಬೆಚ್ಚಿಬಿದ್ದ ಮಗಳು ಅಮ್ಮನಿಗೆ ತೋರಿಸಿದ್ದಾಳೆ. ಇದನ್ನು ನೋಡಿ ಕಂಗಾಲಾದ ಪತ್ನಿ ಮಹಿಳಾ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದಾಳೆ.

ಈ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ನಡೆದಿದ್ದು, ಪತಿಯ ವಿರುದ್ಧ ಆಕ್ರೋಶಗೊಂಡಿರುವ ಪತ್ನಿ ನ್ಯಾಯಕ್ಕಾಗಿ ನಾಗಮಂಗಲ ಮಹಿಳಾ ಸಾಂತ್ವನ ಕೇಂದ್ರದ ಮೊರೆಹೋಗಿದ್ದಾಳೆ.

- Advertisement -

Related news

error: Content is protected !!