- Advertisement -
- Advertisement -

ರಾಮಕುಂಜ: ಇಲ್ಲಿನ ರಾಮಕುಂಜದ ಶ್ರೀ ರಾಮಕುಂಜೇಶ್ವರ ವಿದ್ಯಾರ್ಥಿ ನಿಲಯದಲ್ಲಿದ್ದ ವಿದ್ಯಾರ್ಥಿಯೋರ್ವ ಮನೆಗೆ ಹೋಗುವುದಾಗಿ ಹೇಳಿ ನಾಪತ್ತೆಯಾದ ಘಟನೆ ವರದಿಯಾಗಿದೆ.
ಕಾಲೇಜಿನ ಪ್ರಥಮ ಪಿಯುಸಿ ಓದುತ್ತಿದ್ದ ಅಂಜನ್ ಹಾಸ್ಟೇಲ್ ಗೆ ಮರಳಿ ಬಾರದೆ ಅತ್ತ ಮನೆಗೂ ಹೋಗದೆ ನಾಪತ್ತೆಯಾದ ವಿದ್ಯಾರ್ಥಿ.

ಈ ಬಗ್ಗೆ ಬಾಲಕರ ವಸತಿ ನಿಲಯದ ಮ್ಯಾನೇಜರ್ ರಮೇಶ್ ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೆ. 21 ರಂದು ಮುಂಜಾನೆ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದು ಬಳಿಕ ಮದ್ಯಾಹ್ನ ಕಾಲೇಜು ವಿದ್ಯಾರ್ಥಿಗಳು ಊಟಕ್ಕೆ ವಸತಿ ನಿಲಯಕ್ಕೆ ಬಂದ ಸಮಯ ಅಂಜನ್ ಸಿ,ಎಮ್ ಕಾಲೇಜಿಗೆ ಹೋಗದೇ ಇರುವ ವಿಚಾರ ವಿದ್ಯಾರ್ಥಿಗಳಿಂದ ತಿಳಿದು ಬಂದಿದೆ.
ವಿದ್ಯಾರ್ಥಿಯ ಸ್ವಂತ ವಿಳಾಸವಾದ ಸಿಂಚನಾ ಬ್ಯೂಟಿ ಪಾರ್ಲರ್ , ಮಾರಿಗುಡ್ಡನ ಹಳ್ಳಿ ಕಲ್ಯಾಣ ನಗರ ಚಿಕ್ಕಮಗಳೂರು ಎಂಬಲ್ಲಿ ಅವರ ಪೋಷಕರಲ್ಲಿ ದೂರವಾಣಿ ಮುಖಾಂತರ ವಿಚಾರಿಸಲಾಗಿದ್ದು ಅಂಜನ್ ಸಿ,ಎಮ್ ಮನೆಗೆ ಬಂದಿಲ್ಲವೆಂದು ತಿಳಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



- Advertisement -








