Tuesday, June 23, 2026
spot_imgspot_img
spot_imgspot_img

ಕಡಬ: ಸುಲಿದು ಮಾರಾಟಕ್ಕಿಟ್ಟಿದ್ದ ಅಡಿಕೆ ಕಳವು; ಆರೋಪಿಯ ಬಂಧನ, ಅಡಿಕೆ ಮತ್ತು ಮೋಟಾರ್ ಸೈಕಲ್ ವಶಕ್ಕೆ

- Advertisement -
- Advertisement -

ಕಡಬ: ಸುಲಿದು ಮಾರಾಟ ಮಾಡಲು ಮನೆಯಲ್ಲಿ ಇಟ್ಟಿದ್ದ ಅಡಿಕೆ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕಡಬ ಪೋಲಿಸರು ಬಂಧಿಸಿದ್ದಾರೆ.

ಕಡಬ ತಾಲೂಕು ಹಳೆನೇರಂಕಿ ಗ್ರಾಮದ ಅಲೆಪ್ಪಾಡಿಯ ಸುರೇಶ್ ಎಂಬವರ ಮನೆಯಿಂದ ಪರಮೇಶ್ವರ್ ಎಂಬಾತ ಅಡಿಕೆ ಕದ್ದು ಪರಾರಿಯಾಗಿದ್ದನು.

ಆರೋಪಿಯನ್ನು ಮನೆಯಿಂದ ವಶಕ್ಕೆ ಪಡೆದುಕೊಂಡು ವಿಚಾರಿಸಿದ ಪೋಲಿಸರು ಆತನು ಕಳವು ಮಾಡಿದ ಅಡಿಕೆಯನ್ನು ಮತ್ತು ಕಳವು ಮಾಡಲು ಉಪಯೋಗಿಸಿದ ಮೋಟರ್ ಸೈಕಲ್ ಅನ್ನು ವಶಪಡಿಸಿಕೊಂಡಿದ್ದಾರೆ.

ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -

Related news

error: Content is protected !!