Wednesday, July 22, 2026
spot_imgspot_img
spot_imgspot_img

ಕಾರ್ಕಳ: ಅಪಘಾತದಲ್ಲಿ ಪತಿಗೆ ಗಾಯ; ಚಿಕಿತ್ಸೆಗೆ ಹಣವಿಲ್ಲದೆ ನೊಂದು ಪತ್ನಿ ಆತ್ಮಹತ್ಯೆ..!

- Advertisement -
- Advertisement -

ಕಾರ್ಕಳ: ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಪತಿಯ ಚಿಕಿತ್ಸೆಗೆ ಆರ್ಥಿಕ ಅಡಚಣೆ ಎದುರಾಗಿದೆ ಎಂಬ ಸಂಕಷ್ಟದಲ್ಲಿ ಪತ್ನಿ ಬಾವಿಗೆ ಹಾರಿ ಆತ್ಮಹತ್ಯೆ ಗೈದ ಘಟನೆ ಅಜೆಕಾರು ಸಮೀಪದ ಅಂಡಾರು ಬಾಳೆಹಿತ್ಲು ಎಂಬಲ್ಲಿ ನಡೆದಿದೆ.

ಹಿರ್ಗಾನದಲ್ಲಿ ಎಪ್ರಿಲ್ 9ರಂದು ರಸ್ತೆ ಅಪಘಾತದಲ್ಲಿ ಸತೀಶ್ ಎನ್. ರಾವ್ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದರು. ವೃತ್ತಿಯಲ್ಲಿ ಅವರು ರಿಕ್ಷಾ ಚಾಲಕನಾಗಿದ್ದಾರೆ. ಗಾಯಾಳು ಸತೀಶ್ ಮಣಿಪಾಲದ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ದಾಖಲಾಗಿದ್ದರು. ಎಪ್ರಿಲ್ ೧೩ರಂದು ಗಾಯಾಳುವಿಗೆ ಶಸ್ತ್ರಚಿಕಿತ್ಸೆ ನಡೆಸಬೇಕೆಂದು ವೈದ್ಯರು ಸಲಹೆ ನೀಡಿದ್ದರು. ಇದರಿಂದ ಗಾಯಾಳುವಿನ ಪತ್ನಿ ವನಿತಾ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ಶಸ್ತ್ರ ಚಿಕತ್ಸೆಗೆ ಅಗತ್ಯವಾದ ಹಣವಿಲ್ಲ ಎಂಬ ಕೊರಗಿನಲ್ಲಿ ರಾತ್ರಿ ಪೂರ್ತಿ ಮಲಗದೇ ಬೊಬ್ಬೆ ಹಾಕುತ್ತಿದ್ದರೆಂದು ತಿಳಿದುಬಂದಿದೆ.

ನಸುಕಿನ ಜಾವ 5ರ ಬಳಿಕ ವನಿತಾ ತೋಟದ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಸ್ನಾನಕ್ಕೆ ಹೋಗಿದ್ದ ಮಗ ಸ್ವಸ್ತಿಕ್ ತಾಯಿಯನ್ನು ಕೂಗಿ ಕರೆದಾಗ ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ತೋಟದಲ್ಲಿ ಹುಡುಕಲು ಶುರುಮಾಡಿದರು. ಈ ಘಟನೆ ತಿಳಿದ ನೆರೆಕರೆಯ ನಿವಾಸಿಗಳು ವನಿತಾಳನ್ನು ಹುಡುಕಾಡಿದರೂ ಎಲ್ಲಿಯೂ ಪತ್ತೆಯಾಗದ ಕಾರಣ ಮನೆಯ ಮುಂದಿನ ಬಾವಿಯ ನೀರಿನಲ್ಲಿ ಬಿದ್ದಿರಬಹುದೆಂದು ಅನುಮಾನಗೊಂಡು ಬಾವಿ ನೀರಿಗೆ ಕೋಲನ್ನು ಹಾಕಿ ಹುಡುಕಾಡಿದ್ದು, ಬಾವಿಯ ಆಳದಲ್ಲಿ ವನಿತಾ(45) ರವರ ಮೃತದೇಹ ಪತ್ತೆಯಾಗಿದೆ.

ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಕೇಸು ದಾಖಲಾಗಿದೆ.

vtv vitla
vtv vitla
- Advertisement -

Related news

error: Content is protected !!