Friday, June 19, 2026
spot_imgspot_img
spot_imgspot_img

ಕಾಸರಗೋಡು: ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಸ್ಕೂಟರ್‌; ವಿದ್ಯಾರ್ಥಿ ಮೃತ್ಯು

- Advertisement -
- Advertisement -

ಕಾಸರಗೋಡು: ನಿಯಂತ್ರಣ ತಪ್ಪಿ ಸ್ಕೂಟರ್ ಮಗುಚಿ ಬಿದ್ದ ಪರಿಣಾಮ ವಿದ್ಯಾರ್ಥಿ ಮೃತಪಟ್ಟ ಘಟನೆ ಹೊಸಂಗಡಿಯಲ್ಲಿ ನಡೆದಿದೆ.

ಉಪ್ಪಳ ಪೆರಿಂಗಡಿಯ ಇಬ್ರಾಹಿಂ-ಸಫಿಯಾ ದಂಪತಿ ಪುತ್ರ ಮುಹಮ್ಮದ್ ಇಶಾಂ(15) ಮೃತಪಟ್ಟ ವಿದ್ಯಾರ್ಥಿ. ಮಂಗಲ್ಪಾಡಿ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾ‍ರ್ಥಿಯಾಗಿದ್ದನು. ಹೊಸಂಗಡಿ ಹಳೆ ಚೆಕ್ ಪೋಸ್ಟ್ ಬಳಿ ಘಟನೆ ನಡೆದಿದೆ.

ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆಗೆಸೆಲ್ಪಟ್ಟು ಗಂಭೀರ ಗಾಯಗೊಂಡ ಇಶಾಂನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರು ಪ್ರಯೋಜನವಾಗಿಲ್ಲ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!