Tuesday, September 22, 2026
spot_imgspot_img
spot_imgspot_img

ಕಾಸರಗೋಡು: ಶವರ್ಮ ಸೇವಿಸಿ ವಿದ್ಯಾರ್ಥಿನಿ ಸಾವು ಪ್ರಕರಣ; ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಹೈಕೋರ್ಟ್

- Advertisement -
- Advertisement -

ಕಾಸರಗೋಡು, : ಚೆರ್ವತ್ತೂರಿನ ಕೂಲ್ ಬಾರ್ ನಲ್ಲಿ ಶವರ್ಮ ಸೇವಿಸಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದೆ.

ಮಾಧ್ಯಮ ವರದಿಗಳ ಆಧಾರದ ಮೇಲೆ ಹೈಕೋರ್ಟ್ ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ನಿಲುವು ಸ್ಪಷ್ಟ ಪಡಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದ್ದು ಮಾತ್ರವಲ್ಲದೆ, ನ್ಯಾಯಾಲಯ ಆಹಾರ ಸುರಕ್ಷತಾ ಆಯುಕ್ತರಿಂದ ವಿವರಣೆ ಕೇಳಿದೆ.

ಏ.29 ಮತ್ತು 30 ರಂದು ಚೆರ್ವತ್ತೂರು ಐಡಿಯಲ್ ಫುಡ್ ಪಾಯಿಂಟ್ ಕೂಲ್ ಬಾರ್ ನಲ್ಲಿ ಶವರ್ಮ ಸೇವಿಸಿದ್ದ ಕರಿವೆಳ್ಳೂರು ಪೇರಳದ ದೇವಾನಂದ ಎಂಬ 16 ವರ್ಷದ ವಿದ್ಯಾರ್ಥಿನಿ ಮೃತಪಟ್ಟಿದ್ದಳು. 50ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದರು. ಈ ನಡುವೆ ವಿದ್ಯಾರ್ಥಿನಿಯ ಸಾವಿಗೆ ಶಿಗಲ್ಲಾ ಬ್ಯಾಕ್ಟೀರಿಯಾ ಕಾರಣ ಎಂದು ಈಗಾಗಲೇ ಕೋಜಿಕ್ಕೋಡ್ ನ ಪ್ರಯೋಗಾಲಯದಲ್ಲಿ ನಡೆಸಿದ ತಪಾಸಣೆಯಿಂದ ತಿಳಿದುಬಂದಿದೆ . ಇದಲ್ಲದೆ ಇತರ ಮೂವರಲ್ಲೂ ಶಿಗಲ್ಲಾ ಬ್ಯಾಕ್ಟೀರಿಯಾ ಅಂಶ ಇರುವುದು ತಪಾಸಣೆಯಿಂದ ಪತ್ತೆಯಾಗಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

ಕೂಲ್ ಬಾರ್ ಮೆನೇಜರ್ ಬಂಧನ
ಶವರ್ಮ ಸೇವಿಸಿ ವಿದ್ಯಾರ್ಥಿನಿ ದೇವಾನಂದ ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಚೆರ್ವತ್ತೂರಿನ ಕೂಲ್ ಬಾರ್ ಮ್ಯಾನೇಜರ್ ಪಡನ್ನ ದ ಟಿ . ಅಹಮ್ಮದ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದ ಬಂಧಿತರ ಸಂಖ್ಯೆ ಮೂರಕ್ಕೇರಿದೆ. ವಿದೇಶದಲ್ಲಿರುವ ಕೂಲ್ ಬಾರ್ ನ ಮಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!