Monday, September 21, 2026
spot_imgspot_img
spot_imgspot_img

ಕೇರಳ: ನಡುರಸ್ತೆಯಲ್ಲೇ ಹೆತ್ತವರನ್ನು ಕೊಂದ ಮಗ ಕೊಲೆ ಮಾಡಿ ತಾನೇ ಪೊಲೀಸರಿಗೆ ಕರೆ ಮಾಡಿ ತಿಳಿಸಿದ ಪಾಪಿ

- Advertisement -
- Advertisement -

ಕೇರಳ: ಪಾಪಿ ಮಗನೊಬ್ಬ ನಡುರಸ್ತೆಯಲ್ಲೇ ಹೆತ್ತವರನ್ನು ಕೊಲೆ ಮಾಡಿರುವ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದೆ.

ಕೊಲೆಯಾದವರನ್ನು ತ್ರಿಶೂರ್ ಇಂಚಕುಂಡ್ ಮೂಲದ ಕುಟ್ಟನ್ (60) ಮತ್ತು ಅವರ ಪತ್ನಿ ಚಂದ್ರಿಕಾ (55) ಎಂದು ಗುರುತಿಸಲಾಗಿದೆ. ಕೊಲೆಗೈದು ಆರೋಪಿ ಅನೀಶ್ (30) ತಲೆಮರೆಸಿಕೊಂಡಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆ ಹೆತ್ತವರನ್ನು ಅನೀಶ್ ಕೊಲೆಗೈದಿದ್ದಾನೆ ಎನ್ನಲಾಗಿದೆ.

ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕುಟ್ಟನ್ ಹಾಗೂ ಚಂದ್ರಿಕಾ ರಸ್ತೆಯಲ್ಲಿ ಮನೆಯ ಮುಂದಿನ ಹುಲ್ಲು ಕಟಾವು ಮಾಡುತ್ತಿದ್ದಾಗ ಅನೀಶ್ ಚಾಕು ಹಿಡಿದು ಬಂದು, ಕೊಲೆ ಮಾಡಿದ್ದಾನೆ. ನಂತರ ಸ್ವತಃ ಪೊಲೀಸರಿಗೆ ಕರೆ ಮಾಡಿ ತಂದೆ ತಾಯಿಯನ್ನು ಕೊಂದಿರುವುದಾಗಿ ತಿಳಿಸಿ, ಪರಾರಿಯಾಗಿದ್ದಾನೆ.

- Advertisement -

Related news

error: Content is protected !!