Wednesday, August 12, 2026
spot_imgspot_img
spot_imgspot_img

ದೇರಳಕಟ್ಟೆ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಸ್ ಡಿಕ್ಕಿ; ವಿಟ್ಲ ನಿವಾಸಿ, ದೇರಳಕಟ್ಟೆ ಪಬ್ಲಿಕ್ ಸ್ಕೂಲ್‌ನ ದೈಹಿಕ ಶಿಕ್ಷಕ ಇಸ್ಮಾಯಿಲ್ ನಿಧನ

- Advertisement -
- Advertisement -

ವಿಟ್ಲ: ದೇರಳಕಟ್ಟೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ವಿಟ್ಲ ನಿವಾಸಿ ದೇರಳಕಟ್ಟೆ ಪಬ್ಲಿಕ್ ಸ್ಕೂಲ್‌ನ ದೈಹಿಕ ಶಿಕ್ಷಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರನ್ನು ವಿಟ್ಲ ನಿವಾಸಿ ದೇರಳಕಟ್ಟೆ ಪಬ್ಲಿಕ್ ಸ್ಕೂಲ್‌ನ ದೈಹಿಕ ಶಿಕ್ಷಕ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.

ದೇರಳಕಟ್ಟೆಯಲ್ಲಿ ಇಸ್ಮಾಯಿಲ್ ರವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಸ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತರು ವಿಟ್ಲ ನೀರಕ್ಕಣಿ ನಿವಾಸಿಯಾಗಿರುವ ಅಬ್ದುಲ್ ರಝಾಕ್ ಅವರ ಅಣ್ಣ ಆಗಿದ್ದು, ಪ್ರಸ್ತುತ ದೇರಳಕಟ್ಟೆ ಪಬ್ಲಿಕ್ ಸ್ಕೂಲ್ ನಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

- Advertisement -

Related news

error: Content is protected !!