Sunday, June 28, 2026
spot_imgspot_img
spot_imgspot_img

ನಕಲಿ ನೋಟು ಮುದ್ರಿಸುತ್ತಿದ್ದ ಜಾಲವನ್ನು ಭೇದಿಸಿದ ಪೊಲೀಸರು; ಆರು ಮಂದಿ ಆರೋಪಿಗಳು ಅಂದರ್, ಸೊತ್ತುಗಳು ವಶಕ್ಕೆ

- Advertisement -
- Advertisement -

ಬೀದರ್: 500 ಮುಖ ಬೆಲೆಯ ನಕಲಿ ನೋಟು ಮುದ್ರಿಸುತ್ತಿದ್ದ ಖೋಟಾ ನೋಟು ಜಾಲವನ್ನು ಬೀದರ್ ಪೊಲೀಸರು ಬೇಧಿಸಿ ಭರ್ಜರಿ ಕಾರ್ಯಚರಣೆ ಮಾಡಿದ್ದಾರೆ.

ರಾಕೇಶ್ ಹಾಗೂ ಶರತ್‍ಕುಮಾರ ಬಂಧಿತ ಆರೋಪಿಗಳಾಗಿದ್ದಾರೆ. 500 ಮುಖ ಬೆಲೆಯ ನಕಲಿ ನೋಟು ಮುದ್ರಿಸುತ್ತಿದ್ದರು. ಇದೇ ಪ್ರಕರಣಕ್ಕೆ ಸಂಬಂದಿಸಿದಂತೆ ಈ ಹಿಂದೆ ನಾಲ್ಕು ಜನ ಆರೋಪಿಗಳಾದ ಅಶೋಕ್, ಸೈಯದ್ ಇಬ್ರಾಹಿಂ, ಉಮಾಕಾಂತ್,ಜವದ ಬಂಧನವಾಗಿತ್ತು. ಇಂದು ಇಬ್ಬರನ್ನು ಬಂಧನ ಮಾಡುವ ಮೂಲಕ ಒಟ್ಟು ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

500 ಮುಖ ಬೆಲೆಯ ಒಟ್ಟು 274 ನಕಲಿ ನೋಟುಗಳು ಹಾಗೂ ನೋಟುಗಳನ್ನು ತಯಾರಿಸಲು ಉಪಯೋಗಿಸಿದ ಲ್ಯಾಪಟಾಪ್, ಪ್ರಿಂಟರ್ ಹಾಗೂ ಇತರೆ ಸಾಮಗ್ರಿಗಳು ಬೀದರ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದೂರು ದಾಖಲಾಗಿದ್ದು, ಇಂದು ಎಸ್‍ಪಿ ನಾಗೇಶ್ ಡಿಎಲ್ ಮಾರ್ಗದರ್ಶನದಲ್ಲಿ ಗಾಂಧಿಗಂಜ್ ಪೊಲೀಸರು ನಕಲಿ ನೋಟು ಜಾಲ ಬೇದಿಸಿ ಭರ್ಜರಿ ಕಾರ್ಯಚರಣೆ ಮಾಡಿದ್ದಾರೆ.

- Advertisement -

Related news

error: Content is protected !!