Monday, June 22, 2026
spot_imgspot_img
spot_imgspot_img

ನೆಲ್ಯಾಡಿ: ಆಕಸ್ಮಿಕವಾಗಿ ಕೆರೆಗೆ ಬಿದ್ದು ಬಾಲಕಿ ಸಾವು!

- Advertisement -
- Advertisement -

ನೆಲ್ಯಾಡಿ: ಇಲ್ಲಿನ ಕೊಣಾಲು ಗ್ರಾಮದ ಅಂಬರ್ಜೆ ಎಂಬಲ್ಲಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಬಾಲಕಿಯೋರ್ವಳು ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.

ಮೃತ ಬಾಲಕಿ ಅಂಬರ್ಜೆ ನಿವಾಸಿ ಮೋಹನ ಹಾಗೂ ವಿನೋದ ದಂಪತಿ ಪುತ್ರಿ, ಶ್ರೇಯಾ(18) ಎಂದು ಗುರುತಿಸಲಾಗಿದೆ. ಈಕೆ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿಯಾಗಿದ್ದಳು.

ಮನೆಯ ಸಮೀಪದ ಕೆರೆಗೆ ಶ್ರೇಯಾ ತಾವರೆ ಹೂ ಬಿಡಲೆಂದು ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಮನೆಯವರ ಬಳಿ ಕೆರೆಗೆ ತಾವರೆ ಹೂ ಬಿಡಲು ಹೋಗುವುದಾಗಿ ಹೇಳಿ ಹೋಗಿದ್ದ ಶ್ರೇಯಾ ಹಿಂತಿರುಗಿ ಬರದೇ ಇದ್ದ ಹಿನ್ನೆಲೆಯಲ್ಲಿ ಮನೆಯವರು ಕೆರೆಯ ಕಡೆ ಹೋಗಿ ನೋಡಿದಾಗ ಶ್ರೇಯಾ ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಳು.

- Advertisement -

Related news

error: Content is protected !!