- Advertisement -
- Advertisement -


ಪುತ್ತೂರು: ಧನ್ವಿ ರೈ ಕೋಟೆ ಇವರು ಜನಸ್ಪಂದನ ಕಲಾ ಸಿರಿ ರತ್ನ – 2022 ರಾಜ್ಯ ಮಟ್ಟದ ಪ್ರಶಸ್ತಿಯನ್ನ ತನ್ನ ಮುಡಿಗೆರಿಸಿಕೊಂಡಿದ್ದಾರೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ 5ನೇ ವರ್ಷದ ಟ್ರಸ್ಟಿನ ವಾರ್ಷಿಕೋತ್ಸವದ ಪ್ರಯುಕ್ತ ಸಾಂಸ್ಕೃತಿಕ, ಸಂಗೀತ, ನೃತ್ಯ, ನಾಟಕ, ಲಲಿತಕಲೆ, ಭರತನಾಟ್ಯ, ಯಕ್ಷಗಾನ, ನಟನೆ ಯೋಗ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಧನ್ವಿ ರೈ ಕೋಟೆ ಇವರನ್ನ ಗುರುತಿಸಿ ಕರ್ನಾಟಕ ಜನಸ್ಪಂದನ ಟ್ರಸ್ಟ್ (೨.), ಬೆಂಗಳೂರು ಕೊಡಮಾಡುವ ರಾಜ್ಯ ಮಟ್ಟದ ಪ್ರಶಸ್ತಿಯಾದ ಜನಸ್ಪಂದನ ಕಲಾ ಸಿರಿ ರತ್ನ – 2022 ನೇ ವರ್ಷದ ಪ್ರಶಸ್ತಿಯನ್ನು ನಿಡಿ ಗೌರವಿಸಲಾಯಿತು.



- Advertisement -








