Thursday, June 25, 2026
spot_imgspot_img
spot_imgspot_img

ಪುತ್ತೂರು: ವಸತಿಗೃಹದಲ್ಲಿ ಭಿನ್ನಕೋಮಿನ ಜೋಡಿ ಪತ್ತೆ; ಪೊಲೀಸರಿಗೆ ಮಾಹಿತಿ ನೀಡಿದ ಹಿಂದು ಜಾಗರಣ ವೇದಿಕೆ

- Advertisement -
- Advertisement -

ಪುತ್ತೂರು: ಇಲ್ಲಿನ ಬಸ್ ನಿಲ್ದಾಣದಲ್ಲಿ ಅನ್ಯಕೋಮಿನ ವಿವಾಹಿತ ವ್ಯಕ್ತಿಯೊಂದಿಗೆ ಬೆಂಗಳೂರು ಮೂಲದ ಹಿಂದೂ ಯುವತಿಯೋರ್ವಳು ಪತ್ತೆಯಾದ ಘಟನೆ ನ.2ರಂದು ತಡರಾತ್ರಿ ನಡೆದಿದೆ.

ಬೆಂಗಳೂರಿನ ವಾಸಿಂ(36) ಎಂಬ ಅನ್ಯಕೋಮಿನ ವ್ಯಕ್ತಿಯೊಂದಿಗೆ ಕುಂದಾಪುರ ಮೂಲದ ಬೆಂಗಳೂರಿನಲ್ಲಿ ವಾಸವಿರುವ ಯುವತಿ ಪ್ರೀತಿಸಿ ಆತನೊಂದಿಗೆ ಮನೆ ಬಿಟ್ಟು ಬಂದಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

ವಾಸಿಂಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕ ಳಿದ್ದಾರೆ ಎಂದು ಹೇಳಲಾಗುತ್ತಿದೆ. ಯುವತಿ ಕಾಣೆಯಾದ ಬಗ್ಗೆ ಯುವತಿಯ ಮನೆಯವರಿಗೆ ತಿಳಿಸಿದ್ದು , ಅವರು ಬೆಂಗಳೂರಿನಲ್ಲಿ ಕಾಣೆಯಾದ ಬಗ್ಗೆ ಪ್ರ ಕರಣ ದಾಖಲಾಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಮೂಲದ ಹಿಂದು ಯುವತಿ ಮತ್ತು ವಿವಾಹಿತ ಮುಸ್ಲಿಂ ವ್ಯಕ್ತಿಯೊಬ್ಬರು ರಾತ್ರಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿದ್ದು ಈ ಕುರಿತು ಮಾಹಿತಿ ಪಡೆದ ಹಿಂಜಾವೇ ಸಂಘಟನೆಯ ಕಾರ್ಯಕರ್ತರು ಅವರನ್ನು ಹಿಂಬಾಲಿಸಿದ್ದಾರೆ.

ಯುವತಿ ಮತ್ತು ವ್ಯಕ್ತಿ ವಸತಿ ಗೃಹವೊಂದರಲ್ಲಿ ತಂಗಿರುವ ಕುರಿತು ಖಚಿತ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದರು. ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಆಗಮಿಸಿ ವಾಸಿಂನನ್ನು ವಶಕ್ಕೆ ಪಡೆದಿದ್ದಾರೆ. ನ.3ರಂದು ಬೆಳಿಗ್ಗೆ ಯುವತಿ ಮನೆ ಮಂದಿ ಠಾಣೆಗೆ ಬಂದಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!