Tuesday, September 1, 2026
spot_imgspot_img
spot_imgspot_img

ಪುನೀತ್ ರಾಜ್‌‌ಕುಮಾರ್‌‌ಗೆ ಮರಣೋತ್ತರ ‘ಕರ್ನಾಟಕ ರತ್ನ ಪ್ರಶಸ್ತಿ’; ಸಿಎಂ ಘೋಷಣೆ

- Advertisement -
- Advertisement -

ಬೆಂಗಳೂರು: ದಿವಂಗತ ನಟ ಪುನೀತ್ ರಾಜ್‌‌ಕುಮಾರ್‌‌ಗೆ ಮರಣೋತ್ತರವಾಗಿ ರಾಜ್ಯ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಇಂದು ಅರಮನೆ ಮೈದಾನದಲ್ಲಿ ನಡೆಯುತ್ತಿರುವಂತ ಪುನೀತ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, “ಅಗಲಿದ ಪುನೀತ್ ರಾಜ್‌‌ಕುಮಾರ್‌ ಅವರ ಪಾರ್ಥೀವ ಶರೀರದ ದರ್ಶನ ಸಂದರ್ಭದಲ್ಲಿ ನಾನು ಮುತ್ತು ಕೊಟ್ಟ ಬಗ್ಗೆ ಬೇರೆಯವರು ಬೇರೆ ಬೇರೆ ರೀತಿಯಲ್ಲಿ ಅಂದುಕೊಂಡಿದ್ದರು. ಆದ್ರೇ ಆ ಮುತ್ತನ್ನು ಕನ್ನಡಿಗರೆಲ್ಲರ ಪರವಾಗಿ ನೀಡಿದ್ದೇನೆ” ಎಂದರು.

- Advertisement -

Related news

error: Content is protected !!