Saturday, October 17, 2026
spot_imgspot_img
spot_imgspot_img

ಬಂಟ್ವಾಳ: ಗೀತ ಸಾಹಿತ್ಯ ಮೇಷ್ಟ್ರು ವಿಠಲ ನಾಯಕ್ ಕಲ್ಲಡ್ಕ ಕೊರೊನಾಗೆ ಮೃತ್ಯು ಎಂದು ಭಾವಿಸಿ ಅಭಿಮಾನಿಗಳಿಂದ ಸಂತಾಪ- ವಿಡಿಯೋ ಮೂಲಕ ಸ್ವತಃ ತಾವು ಜೀವಂತವಾಗಿರುವ ವಿಚಾರ ತಿಳಿಸಿದ ವಿಠಲ ನಾಯಕ್

- Advertisement -
- Advertisement -

ಬಂಟ್ವಾಳ: ಕಲ್ಲಡ್ಕ ಬೋಳಂತೂರು ನಿವಾಸಿ ವಿಠಲದಾಸ್ ಎಂಬವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾಗಿ ವಾಟ್ಸಪ್ ನಲ್ಲಿ ಸುದ್ದಿ ಹರಡಿತ್ತು.

ಇದನ್ನು ಗೀತ ಸಾಹಿತ್ಯ ಕಾರ್ಯಕ್ರಮ ನಡೆಸಿಕೊಡುವ ಮೇಷ್ಟ್ರು ವಿಠಲ ನಾಯಕ್ ಕಲ್ಲಡ್ಕ ಮೃತರಾಗಿದ್ದಾರೆಂದು ತಿಳಿದ ಅಭಿಮಾನಿಗಳು ಅವರಿಗೆ ಸಂತಾಪ ಸೂಚಿಸತೊಡಗಿದ್ದ ಬೆಳವಣಿಗೆ ನಡೆದಿದೆ.

ಈ ಬಗ್ಗೆ ವಿಠಲ ನಾಯಕ್ ಅವರಿಗೆ ಆಪ್ತರು ಕರೆ ಮಾಡಿ ತಿಳಿಸಿದ್ದಾರೆ. ಬಳಿಕ ವಿಠಲ ನಾಯಕ್ ಅವರು ಸ್ವತಃ ವಿಡಿಯೋ ಮಾಡಿ, ನಾನು ಆರೋಗ್ಯವಾಗಿದ್ದೇನೆ. ಬೋಳಂತೂರು ನಿವಾಸಿ ವಿಠಲದಾಸ್ ತೀರಿಕೊಂಡಿದ್ದು ಸತ್ಯ ವಿಚಾರ. ನಾನು ವಿಠಲ ನಾಯಕ್ ಆಗಿದ್ದು ನಿಮ್ಮೆಲ್ಲರ ಹಾರೈಕೆಯಿಂದ ಸ್ವಸ್ಥವಾಗಿದ್ದೇನೆ ಎಂದು ತಿಳಿಸಿದ್ದಾರೆ.

ವಿಠಲ ನಾಯಕ್ ಒಂದೂವರೆ ನಿಮಿಷದ ವಿಡಿಯೋದಲ್ಲಿ ನಾನು ಜೀವಂತವಾಗಿದ್ದೇನೆ ಎಂದು ತಿಳಿಸಿರುವುದು ಮತ್ತೆ ವೈರಲ್ ಆಗಿದ್ದು ಇದನ್ನು ತಿಳಿದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿರುವ ವಿಠಲ ನಾಯಕ್ ನಡೆಸಿಕೊಡುವ ಗೀತ ಸಾಹಿತ್ಯ ಕಾರ್ಯಕ್ರಮ ಕರಾವಳಿಯಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದಿದ್ದು ಯೂಟ್ಯೂಬ್ ನಲ್ಲಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ.

- Advertisement -

Related news

error: Content is protected !!