Tuesday, July 21, 2026
spot_imgspot_img
spot_imgspot_img

ಬಂಟ್ವಾಳ: ಲಾರಿಯಡಿಗೆ ಬಿದ್ದು ಮಹಿಳೆ ಮೃತ್ಯು

- Advertisement -
- Advertisement -

ಬಂಟ್ವಾಳ: ಲಾರಿಯಡಿಗೆ ಬಿದ್ದು ಮಹಿಳೆಯೋರ್ವಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮೊಡಂಕಾಪು ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಬೆಂಜನಪದವು ಕರಾವಳಿ ಸೈಟ್ ನಿವಾಸಿ ಉಷಾ(32) ಮೃತಪಟ್ಟ ಮಹಿಳೆ.

ಮೊಡಂಕಾಪು ತೆಂಗಿನ ಎಣ್ಣೆ ಮಿಲ್ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸ್ಕೂಟರ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಮಹಿಳೆ ಮೈ ಮೇಲೆ ಲಾರಿ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಹಿಳೆಗೆ ಬೆಂಜನಪದವು ಎಂಬಲ್ಲಿ ಅಂಗಡಿ ಹೊಂದಿದ್ದಾರೆ. ಸಾಮಾಗ್ರಿಗಳನ್ನು ತರಲು ಪೇಟೆಗೆ ಬಂದಿದ್ದು, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!