Tuesday, June 23, 2026
spot_imgspot_img
spot_imgspot_img

ಬೆಳ್ತಂಗಡಿ: ಸ್ವಚ್ಚಗೊಳಿಸಲು ನೀರಿನ ಟ್ಯಾಂಕ್‌ಗಿಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

- Advertisement -
- Advertisement -

ಬೆಳ್ತಂಗಡಿ: ನೆರೆಮನೆಯ ನೀರಿನ ಟ್ಯಾಂಕ್ ಸ್ವಚ್ಛತೆ ತೆರಳಿದ್ದ ಕೂಲಿ ಕಾರ್ಮಿಕ ನೀರಿನಲ್ಲಿ ಮುಳುಗಿ ಅಸಹಜವಾಗಿ ಮೃತಪಟ್ಟ ಘಟನೆ ಕೊಯ್ಯೂರು ಗ್ರಾಮದ ಅತ್ಯಾರ ಎಂಬಲ್ಲಿ ಏ. 03 ರ ಭಾನುವಾರ ಸಂಜೆ ನಡೆದಿದೆ.ಮೃತರನ್ನು ಶ್ರೀಧರ ಗೌಡ ಎಂದು ಗುರುತಿಸಲಾಗಿದೆ.

ಶ್ರೀಧರ ಗೌಡ ಕೂಲಿ ಕೂಲಿ ಕಾರ್ಮಿಕರಾಗಿದ್ದು ಭಾನುವಾರದಂದು ಅಪರಾಹ್ನ 3 ಗಂಟೆಗೆ ಕೊಯ್ಯೂರು ಗ್ರಾಮದ ಬಜಿಲ ನಿವಾಸಿ, ನೆರೆ ಮನೆಯವರು ಹಾಗೂ ಸಂಬಂಧಿಕರೂ ಆಗಿದ್ದ ಚಂದಪ್ಪ ಗೌಡ ಎಂಬವರ ಮನೆಯ ಬಳಿಯ ನೀರಿನ ಸಂಪ್ ಸ್ವಚ್ಛ ಮಾಡಲು ಹೋಗಿದ್ದರು.

vtv vitla
vtv vitla

ಮಣ್ಣಿನಡಿಯಲ್ಲಿ ನಿರ್ಮಾಣವಾದ ಟ್ಯಾಂಕ್ ಇದಾಗಿದ್ದು, ಸಂಜೆಯಾದರು ಶ್ರೀಧರ್ ಗೌಡ ಮರಳಿ ಬಾರದ ಕಾರಣ ಮನೆಯವರು ಹೋಗಿ ವಿಚಾರಿಸಿದ್ದಾರೆ. ಈ ವೇಳೆ ಚಂದಪ್ಪ ಗೌಡರು ನೀರಿನ ಟ್ಯಾಂಕನ ಬಳಿ ಸಂಜೆ 6 ಗಂಟೆಗೆ ಹೋಗಿ ನೋಡಿದಾಗ ಶ್ರೀಧರ ಗೌಡರು ಟ್ಯಾಂಕ್ ನೀರಿನಲ್ಲಿ ಅರ್ಧ ಮುಳುಗಿದ್ದು ಕಂಡು ಬಂದಿತೆನ್ನಲಾಗಿದೆ. ತಕ್ಷಣ ನೆರೆ ಹೊರೆಯವರು ಸೇರಿ ಕೂಡಲೇ ಅವರನ್ನು ನೀರಿನಿಂದ ಮೇಲಕ್ಕೆತ್ತಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರೆನ್ನಲಾಗಿದೆ.

ಈ ಬಗ್ಗೆ ಮೃತರ ಪತ್ನಿ ನಳಿನಿ ಪೊಲೀಸ್ ದೂರು ನೀಡಿದ್ದಾರೆ.

- Advertisement -

Related news

error: Content is protected !!