Tuesday, September 22, 2026
spot_imgspot_img
spot_imgspot_img

ಮಂಗಳೂರು: ಎಟಿಎಂಗೆ ನುಗ್ಗಿ ದರೋಡೆಗೆ ವಿಫಲ ಯತ್ನ- ಖದೀಮ ಅರೆಸ್ಟ್..!

- Advertisement -
- Advertisement -

ಮಂಗಳೂರು: ನಗರದ ತೊಕ್ಕೊಟ್ಟು ಬಳಿ ಇರುವ ಬರೋಡಾ ಬ್ಯಾಂಕ್ ಎಟಿಎಂ ಬಳಿ ವ್ಯಕ್ತಿಯೋರ್ವ ಎಟಿಎಂ ಯಂತ್ರವನ್ನು ಜಖಂಗೊಳಿಸಿ ಅದರಲ್ಲಿದ್ದ ಹಣವನ್ನು ದೋಚಲು ವಿಫಲ ಯತ್ನ ನಡೆಸಿದ ಘಟನೆ ಫೆ 9ರ ನಸುಕಿನ ವೇಳೆ ನಡೆದಿದೆ.ಆರೋಪಿಯನ್ನು ಕೊಪ್ಪಳ ಜಿಲ್ಲೆಯ ಬಾಚನಳ್ಳಿಯ ಬೀರಪ್ಪ ಎನ್ನಲಾಗಿದೆ.

ಇಂದು ನಸುಕಿನ ಜಾವ ಸುಮಾರು 2 ಗಂಟೆ ವೇಳೆಗೆ ಎಟಿಎಂ ನುಗ್ಗಿದ ಆರೋಪಿ ಎಟಿಎಂ ಯಂತ್ರವನ್ನು ಜಖಂಗೊಳಿಸಿ ಹಣ ದೋಚಲು ಯತ್ನಿಸಿದ್ದಾನೆ. ಆದರೆ ಎಟಿಎಂ ಯಂತ್ರದಿಂದ ಹಣ ಹೊರಬಂದಿಲ್ಲ. ಈತನ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈ ವೇಳೆ ಬ್ಯಾಂಕ್ ಎಟಿಎಂ ನ ಕಣ್ಗಾವಲು ಅಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಿದ್ದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎಟಿಎಂ ನಿಂದ ನಗದು ಕಳವು ಮಾಡಿಲ್ಲ, ಅದರೆ ಕಳವು ಯತ್ನ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!