Wednesday, October 7, 2026
spot_imgspot_img
spot_imgspot_img

ಮಂಗಳೂರು: ಕಂಬಳ ಕ್ಷೇತ್ರದ ಸಾಧಕ ಗುರುವಪ್ಪ ಪೂಜಾರಿ ರಸ್ತೆ ಅಪಘಾತದಲ್ಲಿ ಮೃತ್ಯು

- Advertisement -
- Advertisement -

ಮಂಗಳೂರು: ಕಂಬಳ ಕ್ಷೇತ್ರದ ಸಾಧಕ ಗುರುವಪ್ಪ ಪೂಜಾರಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಗರದ ಹೊರ ವಲಯದ ಗುರುಪುರ ಸೇತುವೆ ಸಮೀಪದ ಕುಕ್ಕುದಕಟ್ಟೆಯಲ್ಲಿ ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡ ಗುರುವಪ್ಪ ಪೂಜಾರಿ ಮೃತಪಟ್ಟಿದ್ದಾರೆ.

ಕುಕ್ಕುದಕಟ್ಟೆಯಲ್ಲಿರುವ ಡೈರಿಗೆ ಎಂದಿನಂತೆ ಹಾಲು ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಮಂಗಳೂರಿನಿಂದ ಗುರುಪುರದತ್ತ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇನ್ನು ಕಳೆದ ನಾಲ್ಕು ದಶಕಗಳಿಂದ ಕಂಬಳ ಕ್ಷೇತ್ರಕ್ಕೆ ಅವರು ಸೇವೆ ನೀಡಿದ್ದರು.

- Advertisement -

Related news

error: Content is protected !!