- Advertisement -
- Advertisement -
ಮಂಗಳೂರು: ಚಲಿಸುತ್ತಿದ್ದ ಜೀಪ್ ಸ್ಕಿಡ್ ಆಗಿ ಪಲ್ಟಿಯಾಗಿ ವತಿಯೊಬ್ಬಳು ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ಮುಂಡೂರು ಸಂಕಲಕರಿಯದಲ್ಲಿ ನಡೆದಿದೆ.
ನಾನಿಲ್ತಾರ್ ನ ಜಯರಾಮ ಎಂಬವರಿಗೆ ಸೇರಿದ ಜೀಪ್ ಅಪಘಾತವಾಗಿದ್ದು, ಜೀಪನ್ನು ಭಾಸ್ಕರ ಎಂಬವರು ಚಲಾಯಿಸುತ್ತಿದ್ದರು. ಬೆಳ್ವಣ್ -ಸಂಕಲಕರಿಯ ರಸ್ತೆ ಕಾಮಗಾರಿ ನಡೆಯುತ್ತಿದ್ದು, ತಿರುವಿನಲ್ಲಿ ಆಕಸ್ಮಿಕವಾಗಿ ಜೀಪ್ ಸ್ಕಿಡ್ ಆಗಿ ರಸ್ತೆಗೆ ಪಲ್ಟಿಯಾಗಿದೆ. ಘಟನೆಯ ವೇಳೆ ಜೀಪ್ ನಲ್ಲಿ ಚಾಲಕ ಸೇರಿ ಐದು ಜನರಿದ್ದರು.
ಅಪಘಾತದ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಗಂಭೀರವಾಗಿದ್ದ ಯುವತಿ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
- Advertisement -