Monday, June 22, 2026
spot_imgspot_img
spot_imgspot_img

ಮಂಗಳೂರು: ಮಿಕ್ಸಿ ಮೋಟಾರ್‌ನೊಳಗಿಟ್ಟು ಸಾಗಿಸುತ್ತಿದ್ದ 461 ಗ್ರಾಂ ಚಿನ್ನ ವಶಕ್ಕೆ

- Advertisement -
- Advertisement -
astr

ಮಂಗಳೂರು: ಕೇರಳದ ತ್ರಿವೆಂಡ್ರಮ್ ಮೂಲದ ವ್ಯಕ್ತಿ ಮಿಕ್ಸರ್ ಗ್ರೈಂಡರ್‌ನ ಮೋಟಾರ್‌ ಒಳಭಾಗದಲ್ಲಿ ಕಂದು ಬಣ್ಣ ಬಳಿದಿರುವ ಕಾಯಿಲ್‌ ಒಳಭಾಗದಲ್ಲಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ 461 ಗ್ರಾಂ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈತ ದುಬೈಯಿಂದ ಮಂಗಳೂರಿಗೆ ಬಂದಿಳಿದಿದ್ದ. ಕಾಯಿಲ್‌ನ ಕೋಟಿಂಗ್ ಅಳಿಸಿದಾಗ ಆಯತಾಕಾರದ ಬಾರ್‌ ಮಾದರಿಯಲ್ಲಿ ಚಿನ್ನವನ್ನು ಸಾಗಿಸುತ್ತಿರುವುದು ಗೊತ್ತಾಗಿದೆ. 24 ಕ್ಯಾರೆಟ್‌ನ 23,09,610 ರೂ. ಮೌಲ್ಯದ 461 ಗ್ರಾಂ ಚಿನ್ನವನ್ನು ಆತ ಅಕ್ರಮವಾಗಿ ಸಾಗಿಸುತ್ತಿದ್ದ.

- Advertisement -

Related news

error: Content is protected !!