Sunday, August 30, 2026
spot_imgspot_img
spot_imgspot_img

ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರ, ಶೂಟೌಟ್ ಪ್ರಕರಣ; ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ ಪೊಲೀಸರು

- Advertisement -
- Advertisement -
vtv vitla
vtv vitla

ಮೈಸೂರು: ಜಿಲ್ಲೆಯಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಮತ್ತು ಶೂಟೌಟ್, ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್​ಶೀಟ್​ನ ಪೊಲೀಸರು ಸಲ್ಲಿಸಿದ್ದಾರೆ. ಎರಡು ಪ್ರಕರಣದ ಚಾರ್ಜ್​ಶೀಟ್​ನ ಪೊಲೀಸರು ಸಲ್ಲಿಸಿದ್ದಾರೆ. ಇದೇ ವರ್ಷ ಆಗಸ್ಟ್ 23 ರಂದು ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಶೂಟೌಟ್ ಮತ್ತು ದರೋಡೆ ನಡೆದಿತ್ತು. ಈ ವೇಳೆ ದಡದಹಳ್ಳಿ ಚಂದ್ರು ಮೃತಪಟ್ಟಿದ್ದರು. 8 ಜನರ ವಿರುದ್ಧ 1,410 ಪುಟಗಳ ಚಾರ್ಜ್​ಶೀಟ್ 2ನೇ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಶೂಟೌಟ್ ಮತ್ತು ದರೋಡೆ ಪ್ರಕರಣ ಸಂಬಂಧ 7 ಜನರನ್ನು ಬಂಧಿಸಲಾಗಿದೆ, ಒಬ್ಬ ತಲೆ ಮರೆಸಿಕೊಂಡಿದ್ದಾನೆ.

vtv vitla
vtv vitla

ಇನ್ನು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್​ಶೀಟ್​ ಕೂಡ ಸಲ್ಲಿಕೆ ಮಾಡಲಾಗಿದೆ. ಪೊಲೀಸರು 6 ಮಂದಿ ವಿರುದ್ಧ ಮೂರನೇ ಜೆಎಂಎಫ್​ಸಿ ನ್ಯಾಯಾಲಯಕ್ಕೆ 1,499 ಪುಟಗಳ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. ಬಂಧಿತ 7 ಜನರಲ್ಲಿ ಒಬ್ಬನ ಪಾತ್ರ ಇಲ್ಲ. ಹೀಗಾಗಿ ಆತನನ್ನು ಕೈ ಬಿಟ್ಟು ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ.

ಗುರುತು ಪತ್ತೆ ಹಚ್ಚುವ ಕಾರ್ಯ
ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಯಿಂದ ಆರೋಪಿಗಳ ಗುರುತು ಪತ್ತೆ ಹಚ್ಚುವ ಕಾರ್ಯ ಸೆ.23ಕ್ಕೆ ನಡೆದಿದೆ. ಮೈಸೂರು ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಗುರುತು ಪತ್ತೆ ಕಾರ್ಯ ನಡೆಸಲಾಗಿತ್ತು. ಮೈಸೂರು ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿಗಳನ್ನು ಪತ್ತೆ ಮಾಡುವ ಕಾರ್ಯ ನಡೆದಿದೆ. ಈಗಾಗಲೇ ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತ ಯುವತಿ ಹೇಳಿಕೆ ದಾಖಲು ಮಾಡಲಾಗಿದೆ. ಬಳಿಕ, ಸೆ.23ಕ್ಕೆ ಜೈಲಿನಲ್ಲಿ ಆರೋಪಿಗಳ ಗುರುತು ಪತ್ತೆ ಹಚ್ಚುವ ಕಾರ್ಯ ಮಾಡಲಾಗಿದೆ.

vtv vitla
vtv vitla
- Advertisement -

Related news

error: Content is protected !!