
ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ 2023ರ ಮಾರ್ಚ್ ತಿಂಗಳ 05ರಿಂದ 10ರ ತನಕ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಲ್ಲಿ ಕೃಷ್ಣಪ್ಪ ಗೌಡ ಗುರ್ಮೆಯವರ ಅಧ್ಯಕ್ಷತೆಯಲ್ಲಿ ಗುರ್ಮೆ ತರವಾಡ್ ವಲಯ ಸಮಿತಿಯ ರಚನೆಯ ಸಭೆ ನಡೆಸಲಾಯಿತು.
ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಯಶಸ್ವಿಗೆ ಸಹಕರಿಸುವಂತೆ ಈ ವಲಯದ ಜನರು ಸಹಕರಿಸಬೇಕೆಂದು ಕುಕ್ಕಾಜೆ ಕ್ಷೇತ್ರ ಪರಮಪೂಜ್ಯ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿಯವರು ವಿನಂತಿಸಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ಸಂಪನ್ನಗೊಂಡಿದೆ ಎಂಬುದನ್ನು ನೀವು ಎಲ್ಲರೂ ನಮ್ಮೊಂದಿಗಿದ್ದು ನಡೆಸಿಕೊಡಬೇಕೆಂದು ವಿನಂತಿಸಿದರು. ಕುಕ್ಕಾಜೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಾಗೂ ಶ್ರಮದಾನ ಮೂಲಕ ಈ ಹಿಂದೆಯೂ ಸಹಕರಿಸಿರುತ್ತೇವೆ. ಮಂದೆಯೂ ಸಹಕರಿಸುವುದಾಗಿ ವಲಯ ಸಮಿತಿಯವರು ಭರವಸೆ ನೀಡಿದರು, ಹರೀಶ್, ಜಯರಾಮ, ಗಂಗಾಧರ ಗೌಡ, ತಿಮ್ಮಪ್ಪ ಗೌಡ, ಹಾಗೂ ಕುಕ್ಕಾಜೆ ಕ್ಷೇತ್ರದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗುರ್ಮೆ ವಲಯ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಕೃಷ್ಣಪ್ಪ ಗೌಡ, ಉಪಾಧ್ಯರಾಗಿ ಗಂಗಾಧರ ಗೌಡ, ಕಾರ್ಯದರ್ಶಿಯಾಗಿ, ಹರೀಶ್ ಜತೆ ಕಾರ್ಯದರ್ಶಿಯಾಗಿ ಜಯರಾಮ್, ಕಾರ್ಯಕಾರಿ ಸದಸ್ಯರಾಗಿ ತಿಮ್ಮಪ್ಪ ಗೌಡ, ವಾಸು ಗೌಡ, ಜೊಳಿಯಪ್ಪ ಗೌಡ, ಪೂವಪ್ಪ ಗೌಡ, ಜಗನ್ನಾಥ ಗೌಡ, ಸೇಸಪ್ಪ ಗೌಡ, ಆನಂದ ಗೌಡ, ಶ್ರೀಧರ ಗೌಡ, ಬಾಸ್ಕರ ಗೌಡ, ಶ್ರೀನಿವಾಸ ಗೌಡ, ಹಾಗೂ ಸುಮಾರು 25 ಮಂದಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಹರೀಶ್ ಗುರ್ಮೆ ಸ್ವಾಗತಿಸಿ, ಸತ್ಯ ಪ್ರಸಾದ್ ಕುಕ್ಕಾಜೆ ವಂದಿಸಿದರು.
- ಹಿಜಾಬ್ ವಿರುದ್ಧ ಕೇಸರಿ ಶಾಲು ಅಭಿಯಾನ; ಶಾಸಕ ಯತ್ನಾಳ್, ಬೆಂಬಲಿಗರನ್ನ ವಶಕ್ಕೆ ಪಡೆದ ಪೊಲೀಸರು
- ವಿಟ್ಲ: ಜಯಕರ್ನಾಟಕ ಜನಪರ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ವಿತರಣೆ ಮತ್ತು ನೆಡುವ ಕಾರ್ಯಕ್ರಮ
- ಕಳ್ಳತನ ಹಾಗೂ ಪೊಲೀಸ್ ವಶದಿಂದ ಪರಾರಿಯಾದ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ
- ಮೆಲ್ಕಾರ್ ಫ್ಲೈಓವರ್ ಬಳಿ ಎಂಡಿಎಂಎ ಸಾಗಾಟ ಪತ್ತೆ: ಮೂವರು ಆರೋಪಿಗಳ ಬಂಧನ
- ಹೂವಿನ ಕುಂಡದಲ್ಲಿತ್ತು ಲಂಚದ ಕಂತೆ! – ಕಾಸರಗೋಡು ಆರ್ಟಿಒಗೆ ವಿಜಿಲೆನ್ಸ್ ಮಿಂಚಿನ ದಾಳಿ










