Tuesday, July 28, 2026
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ; ಬಿಜೆಪಿಯಿಂದ ಪ್ರಣಾಳಿಕೆಯಲ್ಲಿ ಯಾವೆಲ್ಲಾ ಅಂಶಗಳಿಗೆ ಒತ್ತು ನೀಡಲಾಗಿದೆ..?

- Advertisement -
- Advertisement -
vtv vitla
vtv vitla

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ಈಗಾಗಲೇ ಬಿಜೆಪಿ ಪಾಳಯ 18 ವಾರ್ಡ್ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಹೀಗಾಗಿ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಶಾಸಕ ಸಂಜೀವ ಮಠಂದೂರು ಅವರು ಇಂದು ವಿಟ್ಲ ಬಿಜೆಪಿ ಕಾರ್ಯಲಯದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.

ಈ ವೇಳೆ ಬಿಜೆಪಿ ನಾಯಕರು ಹಾಗೂ 18 ವಾರ್ಡ್’ಗಳ ಬಿಜೆಪಿ ಅಭ್ಯರ್ಥಿಗಳು ಉಪಸ್ಥಿತರಿದ್ದರು.

vtv vitla

ಪ್ರಾಣಾಳಿಕೆಯ ಅಂಶಗಳು ಈ ರೀತಿ ಇವೆ:

  1. ವಿಟ್ಲ ನಗರದೊಳಗಿನ ಎಲ್ಲಾ ರಸ್ತೆಗಳಿಗೆ ಕಾಂಕ್ರೀಟೀಕರಣ ಮಾಡಲಾಗುವುದು.
  2. ದಿನದ 24 ಗಂಟೆಯೂ ಕುಡಿಯುವ ನೀರು ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುವುದು.
    (ಈ ಯೋಜನೆಗೆ ಈಗಾಗಲೇ ರೂ. 115 ಕೋಟಿ ಮಂಜೂರಾತಿಗೊ0ಡಿದೆ)
  3. ಬಡವರಿಗೆ ನಿವೇಶನ ಹಾಗೂ ಮನೆಯನ್ನು ಒದಗಿಸಲು ಆದ್ಯತೆ ನೀಡಲಾಗುವುದು.
  4. ವಿಟ್ಲ ಪೇಟೆಯಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ರಿಂಗ್ ರಸ್ತೆ ನಿರ್ಮಾಣ ಹಾಗೂ ಪೇ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗುವುದು.
  5. ನಗರದಲ್ಲಿ ತುಂಡು ನಿವೇಶನ ಮತ್ತು ಯೋಜನಾ ಪ್ರಾಧಿಕಾರವನ್ನು ಪುತ್ತೂರು ನಗರ ಪ್ರಾಧಿಕಾರದೊಂದಿಗೆ ಜೋಡಿಸಿ ಅವಳಿ ನಗರಗಳಿಗೆ ಒಂದೇ ಪ್ರಾಧಿಕಾರ ರಚನೆ ಮಾಡಲಾಗುವುದು.
  6. ವಿಟ್ಲ ಪಟ್ಟಣ ಪಂಚಾಯತಿಗೆ ಸುಸಜ್ಜಿತವಾದ ಆಡಳಿತ ಕಛೇರಿ ನಿರ್ಮಾಣ ಮತ್ತು ಒಂದೇ ಸೂರಿನಡಿಯಲ್ಲಿ ನಾಡಕಛೇರಿ, ಸಬ್‌ರಿಜಿಸ್ಟ್ರಾರ್ ಕಛೇರಿ, ಉಪಖಜಾನೆ, ಕಂದಾಯ ನಿರೀಕ್ಷಕರ ಕಛೇರಿ, ಗ್ರಾಮ ಕರಣಿಕರ ಕಛೇರಿ ಇವೇ ಮೊದಲಾದ ಕಛೇರಿಗಳನ್ನು ಒಳಗೊಂಡ0ತೆ ಆಡಳಿತ ಸೌಧ ನಿರ್ಮಾಣ
  7. ವಿಟ್ಲದಲ್ಲಿ ಸುಸಜ್ಜಿತವಾದ ಈಜುಕೊಳ, ಪುರಭವನ, ಉದ್ಯಾನವನಗಳನ್ನು ನಿರ್ಮಿಸಲಾಗುವುದು.
  8. ವಿಟ್ಲದ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಜನರಿಗೆ ಇನ್ನೂ ಉತ್ತಮವಾದ ಆರೋಗ್ಯ ಸೇವೆಯನ್ನು ಒದಗಿಸಲು ಪ್ರಯತ್ನಿಸಲಾಗುವುದು.
  9. ವಿಟ್ಲದಲ್ಲಿರುವ ಕ್ರೀಡಾಪಟುಗಳಿಗೆ ಅನುಕೂಲವಾಗುವ ದೃಷ್ಠಿಯಲ್ಲಿ ಒಂದು ಉತ್ತಮವಾದ ಕ್ರೀಡಾಂಗಣದ ರಚನೆ.
  10. ಸ್ವಚ್ಛತೆಗೆ ಇನ್ನೂ ಹೆಚ್ಚಿನ ಆದ್ಯತೆಯನ್ನು ನೀಡಿ ಪೇಟೆಯಲ್ಲಿರುವ ರಾಜಕಾಲುವೆಗಳ ನವೀಕರಣ ಹಾಗೂ ಸುಸಜ್ಜಿತವಾದ ಒಳಚರಂಡಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು.
  11. ವಿದ್ಯುತ್ ಬಳಕೆ ಹಾಗೂ ಇಂಧನ ಉಳಿತಾಯ ದೃಷ್ಠಿಯಿಂದ ಎಲ್.ಇ.ಡಿ. ಬಲ್ಬಗಳ ಬಳಕೆಗೆ ಆದ್ಯತೆ ನೀಡಲಾಗುವುದು.
  12. ವಿಟ್ಲವನ್ನು ತಾಲೂಕು ಕೇಂದ್ರವಾಗಿ ಪರಿವರ್ತಿಸುವ ಪ್ರಯತ್ನಗಳು ಈಗಾಗಲೇ ಆರಂಭವಾಗಿದ್ದು, ಈ ದಿಸೆಯಲ್ಲಿ ಇನ್ನೂ ಹೆಚ್ಚಿನ ಪ್ರಯತ್ನ ಮಾಡಲಾಗುವುದು.

ಕಳೆದ ಬಾರಿಯ ನಮ್ಮ ಪ್ರಣಾಳಿಕೆಯಲ್ಲಿ ಹೆಚ್ಚಿನವುಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಈ ಬಾರಿಯೂ ಕೂಡಾ ಬಿಜೆಪಿಯ ಎಲ್ಲಾ 18 ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸಿಕೊಟ್ಟಲ್ಲಿ ವಿಟ್ಲವನ್ನು ಒಂದು ಸರ್ವಾಂಗ ಸುಂದರ ನಗರವನ್ನಾಗಿ ಪರಿವರ್ತಿಸಲಾಗುವುದು

vtv vitla
vtv vitla
- Advertisement -

Related news

error: Content is protected !!