Wednesday, July 22, 2026
spot_imgspot_img
spot_imgspot_img

ವಿಟ್ಲ: ಪ್ರಿಯತಮೆಯನ್ನು ನೋಡಲು ಬಂದ ಯುವಕ ಮತ್ತು ಸ್ನೇಹಿತನಿಗೆ ಹಲ್ಲೆ ಪ್ರಕರಣ; ನಾಲ್ವರ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -
vtv vitla
vtv vitla

ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಹೇಮಾಜೆ ಎಂಬಲ್ಲಿ ಪ್ರಿಯತಮೆಯನ್ನು ನೋಡಲು ಬಂದ ಯುವಕ ಹಾಗೂ ಸ್ನೇಹಿತನನ್ನು ಬಿಟ್ಟು ನಾಲ್ವರ ತಂಡ ಹಲ್ಲೆ ನಡೆಸಿದೆ ಎಂದು ಆರೋಪಿಸಿ ವಿಟ್ಲ ಪೊಲೀಸ್ ಠಾಣೆಗೆ‌ ದೂರು ನೀಡಿದ್ದಾರೆ. ಪ್ರಕರಣದ ಆರೋಪಿಗಳು ಬಾಪುಂಞ , ಹಕೀಂ, ಹಂಝ್‌, ಅಶ್ರಫ್‌ ಎನ್ನಲಾಗಿದೆ.

ಇದನ್ನೂ ಓದಿ: ತಾನು ಪ್ರೀತಿಸುತ್ತಿದ್ದ ಯುವತಿಯನ್ನು ನೋಡಲು ಬಂದ ಯುವಕ; ಯುವಕ ಮತ್ತು ಆತನ ಸ್ನೇಹಿತನಿಗೆ ಪ್ರಿಯತಮೆಯ ಮನೆಯವರಿಂದ ಹಲ್ಲೆ

ಜ.17ರಂದು  ಮದ್ಯಾಹ್ನದ ವೇಳೆಗೆ ಆಶಿಕ್ ತನ್ನ ಗೆಳೆಯ ಶಮೀರನನ್ನು ಸ್ಕೂಟರನಲ್ಲಿ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಹೇಮಾಜೆ ಎಂಬಲ್ಲಿಗೆ ಬಿಟ್ಟು ವಾಪಾಸು ಕರೆದುಕೊಂಡು ಹೋಗಲು ಅಲ್ಲಿಯೇ ರಸ್ತೆಯ ಬದಿಯಲ್ಲಿ ಕಾಯುತ್ತಾ ನಿಂತಿದ್ದ  ವೇಳೆ  ಬಿಳಿ ಬಣ್ಣದ ಬೊಲೆರೋ ವಾಹನದಲ್ಲಿ ಬಂದ ನಾಲ್ವರು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿ ಜೀವಬೆದರಿಕೆ ಒಡ್ಡಿದ್ದಾರೆ  ಎಂದು  ಅಬ್ದುಲ್ ಆಶಿಕ್ ರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರು ನೀಡಿದ್ದು, ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!