Saturday, July 25, 2026
spot_imgspot_img
spot_imgspot_img

ವಿಟ್ಲ: ಮೆಸ್ಕಾಂ ಉಪವಿಭಾಗ ವತಿಯಿಂದ 66ನೇ ಕನ್ನಡ ರಾಜ್ಯೋತ್ಸವ ಆಚರಣೆ

- Advertisement -
- Advertisement -

ವಿಟ್ಲ: ಮೆಸ್ಕಾಂ ವಿಟ್ಲ ಉಪವಿಭಾಗ ವತಿಯಿಂದ 66 ನೇ ಕನ್ನಡ ರಾಜ್ಯೋತ್ಸವ ಆಚರಣೆ ಸಂಭ್ರಮದಿಂದ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡ ಸಹಾಯಕ ಕಾರ್ಯನಿರ್ವಾಹಕ ಅಭಯಂತರ ಪ್ರವೀಣ್ ಜೋಷಿ ದೀಪ ಬೆಳಗಿಸಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆಗಾರರಾದ ಸಂಘದ ವಿಟ್ಲ ಸಮಿತಿಯ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಅಡ್ಯಂತಾಯ, ವಿಟ್ಲ ಮೆಸ್ಕಾಂನ ವಿಟ್ಲ ಉಪವಿಭಾಗದ ಎಲ್ಲಾ ಅಧಿಕಾರಿ ನೌಕರರು, ಪವರ್ ಮೆನ್‌ಗಳು, ಮಹಿಳಾ ನೌಕರರು, ಸ್ಥಳೀಯ ಸಿಬ್ಬಂದಿ ಜಯರಾಮ ಆಳ್ವ ಪೆರುವಾಯಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!