

ವಿಟ್ಲ: ವಿಟ್ಲ ಸುತ್ತಮುತ್ತಲಿನಲ್ಲಿ ಈದುಲ್ ಫಿತರ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಡಗರದಿಂದ ಆಚರಿಸಿದರು. ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಖತೀಬ್ ಮಹಮ್ಮದ್ ಅಲಿ ಫೈಝಿ ಇರ್ಫಾನಿ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈದುಲ್ ಫಿತರ್ ಸಂದೇಶ ನೀಡಿದ ಅವರು ರಮ್ಝಾನ್ ತಿಂಗಳಲ್ಲಿ ಮೈಗೂಡಿಸಿಕೊಂಡ ಸದ್ಗುಣಗಳನ್ನು ಕೇವಲ ಈ ತಿಂಗಳಿಗೆ ಮಾತ್ರ ಸೀಮಿತಗೊಳಿಸದೆ ಜೀವನಪೂರ್ತಿ ಅನುಸರಿಸಿ ಜೀವನವನ್ನು ಪಾವನಗೊಳಿಸಲು ಕರೆ ನೀಡಿದರು. ಕುಟುಂಬ ಸಂಬಂಧವನ್ನು ಬಲಪಡಿಸುವ ಜೊತೆಗೆ ಸಹೋದರತೆ, ಶಾಂತಿ, ಸಮಾನತೆ, ಸೌಹಾರ್ದತೆಯನ್ನು ನೆಲೆಗೊಳಿಸುವಂತೆ ಕರೆ ನೀಡಿದರು.

ವಿಟ್ಲ ಟೌನ್ ಮಸೀದಿಯಲ್ಲಿ ಖತೀಬು ಅಬ್ಬಾಸ್ ಮದನಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದೇಶ ನೀಡಿದ ಅವರು ಈದುಲ್ ಫಿತರ್ ಕುಟುಂಬ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಇಸ್ಲಾಂ ಶಾಂತಿಯನ್ನು ಸಾರಿದೆ. ಇಸ್ಲಾಂ ಎಂದು ಪ್ರತಿಕಾರದ ಧರ್ಮವಲ್ಲ. ಸೌಹಾರ್ದತೆಯನ್ನು ಸಾರಿದೆ ಎಂದರು.
ಮುಹಿಯುದ್ದೀನ್ ಜುಮ್ಮಾ ಮಸೀದಿ ಕೆಲಿಂಜದಲ್ಲಿ ಉಸ್ತಾದ್ ಅಬ್ಬಾಸ್ ದಾರಿಮಿಯವರ ನೇತೃತ್ವದಲ್ಲಿ ಈದ್ ನಮಾಝ್ ಪ್ರಾರ್ಥನೆ ಸಲ್ಲಿಸಿದರು ಈದ್ ಸಂದೇಶವನ್ನು ಸಾರಿ ಈದ್ ಉಲ್ ಪಿತರ್ ಹಬ್ಬವು ಶಾಂತಿ ಸಮಾಧಾನ ಸಹೋದರತೆಯನ್ನು ಸಾರುತ್ತದೆ ಎಂದು ಹೇಳುತ್ತ ಸವ೯ರಿಗೂ ಈದ್ ಶುಭವನ್ನು ಕೋರಿದರು.










