- Advertisement -
- Advertisement -


ವಿಟ್ಲ : ಹಿಂದೂ ನಾಮಧೇಯದಲ್ಲಿ ನಡೆಯುತ್ತಿರುವ ಹೋಟೆಲ್ ಗಳಲ್ಲಿ ಹಲಾಲ್ ಬೋರ್ಡ್ ಯಾವುದೇ ಕಾರಣಕ್ಕೂ ಹಾಕಬಾರದು ಎಂದು ಮನವಿ ಮಾಡಿ ಹಿಂದೂ ಸಂಘಟನೆಗಳು ನಡೆಸುತ್ತಿರುವ ಹಲಾಲ್ ಹಟಾವೋ ಅಭಿಯಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ತಾಲೂಕಿನಲ್ಲಿ ಭರ್ಜರಿ ಸ್ಪಂದನೆ ದೊರಕಿದೆ.

ಭಾನುವಾರದಂದು ಪ್ರಾರಂಭಿಸಿದ ಅಭಿಯಾನದಂತೆ ಪೇಟೆಯ ಎಲ್ಲಾ ಹಿಂದೂ ಪರ ಹೋಟೆಲ್ ಗೆ ಭೇಟಿಯಿತ್ತು ಮಾಲಕರಲ್ಲಿ ಸಂಘಟನೆಯವರು ಮನವಿಯನ್ನು ಮಾಡಿದರು. ವ್ಯಾಪಾರದಲ್ಲಿ ಇಸ್ಲಾಂ ನಿಯಮಗಳ ಹೇರುವಿಕೆಯ ವಿರುದ್ಧ ಪ್ರಾರಂಭವಾಗಿರುವ ಈ ಅಭಿಯಾನಕ್ಕೆ ಎಲ್ಲಾ ಹಿಂದೂ ಹೋಟೆಲ್ ಮಾಲಕರು ಸಹಕರಿಸಬೇಕು ಎಂದು ತಿಳಿಸಲಾಗಿದೆ.
ಇದಕ್ಕೆ ಮಾಲಕರು ಸ್ಪಂದನೆ ನೀಡಿರುವುದಾಗಿ ತಿಳಿದು ಬಂದಿದ್ದು ಅಭಿಯಾನದಲ್ಲಿ ಹಿಂದೂ ಮುಖಂಡರಾದ ಅಕ್ಷಯ್ ರಜಪೂತ್, ಧನಂಜಯ ಸೇರ್ಕಳ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಹಲಾಲ್ ಹಟಾವೋ ಅಭಿಯಾನದ ನೇತೃತ್ವದೊಂದಿಗೆ ಹೋಟೆಲ್’ಗೆ ಭೇಟಿ ನೀಡಿದರು.


- Advertisement -








