Tuesday, September 22, 2026
spot_imgspot_img
spot_imgspot_img

ಸವಣೂರು: ರೈಲು ಡಿಕ್ಕಿ ಹೊಡೆದು ಕಾಡುಕೋಣಗಳು ಸಾವು

- Advertisement -
- Advertisement -

ಸವಣೂರು: ನರಿಮೊಗರು ಗ್ರಾಮದ ಗಡಿಪ್ಪಿಲ ರೈಲ್ವೆ ಹಳಿಯಲ್ಲಿ ಕಾಡುಕೋಣ ಮತ್ತು ಅದರ ಮರಿ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನಡೆದಿದೆ. ಸ್ಥಳೀಯ ಕೃಷಿ ತೋಟಗಳಿಗೆ ಮೇವು ಅರಸಿ ಬಂದಿದ್ದ ಕಾಡುಕೋಣಗಳು ಬೆಳಿಗ್ಗೆ ಮರಳಿ ಕಾಡು ಸೇರಲು ರೈಲ್ವೆ ಹಳಿಯಲ್ಲಿ ಹೋಗುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದೆ.

ಘಟನಾ ಸ್ಥಳಕ್ಕೆ ಎಸಿಎಫ್ ಕಾರ್ಯಪ್ಪ, ಪುತ್ತೂರು ವಲಯಾರಣ್ಯಾಧಿಕಾರಿ ಕಿರಣ್, ನರಿಮೊಗರು ಉಪ ವಲಯಾರಣ್ಯಾಧಿಕಾರಿ ಕುಮಾರಸ್ವಾಮಿ, ಇಪುತ್ತೂರು ಉಪ ವಲಯಾರಣ್ಯಾಧಿಕಾರಿ ಶಿವಾನಂದ ಆಚಾರ್ಯ, ಅರಣ್ಯ ರಕ್ಷಕರಾದ ಸತ್ಯನ್ ಡಿ.ಜಿ ಹಾಗೂ ದೀಪಕ್ ಭೇಟಿ ನೀಡಿ ಸಾವನ್ನಪ್ಪಿದ ಕಾಡುಕೋಣಗಳ ಮರಣೋತ್ತರ ಮಹಜರು ನಡೆಸಿದರು.

- Advertisement -

Related news

error: Content is protected !!